ಬೆಂಗಳೂರು:ಏಪ್ರಿಲ್ 12: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಇಂದು ವಿಧಿವಶರಾಗಿದ್ದಾರೆ
ಖ್ಯಾತ ಜ್ಯೋತಿಷಿ ಎಸ್.ಕೆ.ಜೈನ್ ಅವರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ ಎನ್ನಲಾಗಿದೆ. ಎಸ್.ಕೆ.ಜೈನ್ ಅವರ ಪ್ರಾರ್ಥೀವ ಶರೀರವನ್ನು ಬೆಂಗಳೂರಿನ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಂದು ರಾತ್ರಿ ಆಸ್ಪತ್ರೆಯಿಂದ ತರಲಾಗುವುದು, ಬಳಿಕ ನಾಳೆಯೇ ಅವರ ಅಂತ್ಯಸಂಸ್ಕಾರವನ್ನುನೇರವೇರಿಸಲಾಗುವುದು ಅಂತ ತಿಳಿದುಬಂದಿದೆ.
ಇನ್ನೂ ಕನ್ನಡ ಮಾಧ್ಯಮ ಲೋಕದಲ್ಲಿ ಉದಯ ಟಿವಿಯಲ್ಲಿ ಅವರು ಜ್ಯೋತಿಶಿ ಕಾರ್ಯಕ್ರಮವನ್ನು ನಡೆಸಿಕೊಳ್ಳುತ್ತಿದ್ದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.