ಕಾರ್ಕಳ:ಏಪ್ರಿಲ್ 11:ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಕಾಡುಹೊಳೆ ವೆಂಕಟರಮಣ ಭಟ್(ಬಂಗಾರ್ ಭಟ್ರು) ಅನಾರೋಗ್ಯದಿಂದ ಗುರುವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅಜೆಕಾರು, ಕಾಡುಹೊಳೆ, ಮುನಿಯಾಲು ಪರಿಸರದಲ್ಲಿ ಬಂಗಾರ್ ಭಟ್ರು ಎಂದೇ ಚಿರಪರಿಚಿತರಾಗಿದ್ದ ವೆಂಕಟರಮಣ ಭಟ್ ಧಾರ್ಮಿಕ ಹಾಗೂ ಪೌರೋಹಿತ್ಯ ಕೈಂಕರ್ಯ ಮಾತ್ರವಲ್ಲದೇ ಕೃಷಿ, ಹೈನುಗಾರಿಕೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.