ಉಡುಪಿ:ಏಪ್ರಿಲ್ 11: ಮಹಿಳಾ ಬಸ್ ನಿರ್ವಾಹಕಿ ಇನ್ನೊಂದು ಬಸ್ ನ ನಿರ್ವಾಹಕನ ಮೇಲೆ ಹಲ್ಲೆಗೆ ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ
ಉಡುಪಿಯ ಸಂತೆಕಟ್ಟೆ ಬಳಿ ಈ ಘಟನೆ ನಡೆದಿದೆ. ಖಾಸಗಿ ಬಸ್ ಗಳ ಟೈಮಿಂಗ್ ವಿಚಾರದಲ್ಲಿ ಈ ಗಲಾಟೆ ನಡೆದಿದ್ದು, ತನಗಿಂತ ಮೊದಲೇ ಬಂದು ಬಸ್ ನಿಲ್ಲಿಸಿದ್ದಕ್ಕಾಗಿ, ಮಹಿಳಾ ನಿರ್ವಾಹಕಿ ಕಂಡಕ್ಟರ್ ರೇಖಾ ಅವರು ಮತ್ತೊಂದು ಬಸ್ ಕಂಡಕ್ಟರ್ ವಿರುದ್ಧ ಹರಿಹಾಯ್ದಿದ್ದಾರೆ.
ಆತನನ್ನು ತರಾಟೆಗೆ ತೆಗೆದುಕೊಂಡು ಜಾಡಿಸಿದ್ದಾರೆ. ಒಂದು ಹಂತದಲ್ಲಿ ಚಪ್ಪಲಿಯನ್ನೂ ಕೈಗೆತ್ತಿಕೊಂಡಿದ್ದಾರೆ. ಮಹಿಳೆ ನಿರ್ವಾಹಕಿಯ ಗಲಾಟೆ ಕಂಡು ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ.
ಸದ್ಯ ಈ ಘಟನೆಯ ಸಿಸಿಟಿವಿ ದ್ರಶ್ಯಾವಳಿಗಳು ವ್ಯೆರಲ್ ಆಗುತ್ತಿವೆ.