ಉಡುಪಿ : ಏಪ್ರಿಲ್ 11: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 10ರಿಂದಲೇ ಅವಕಾಶ ನೀಡಲಾಗಿದೆ.
ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಯನ್ನು ಪಡೆಯಲು ಏಪ್ರಿಲ್ 16ರ ತನಕ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಏಪ್ರಿಲ್ 19ರ ತನಕ, ಮತ್ತು ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಏಪ್ರಿಲ್ 14 ರಿಂದ 20ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸುವವರು ಮರುಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ. ಮರು ಮೌಲ್ಯಮಾಪನದ ಮತ್ತು ಮರು ಎಣಿಕೆಯ ಫಲಿತಾಂಶವನ್ನು ಮಂಡಳಿಯು, kseab.karnataka.gov.inಎಂಬ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ. ಮರುಮೌಲ್ಯಮಾಪನ ಅರ್ಜಿಯುನ್ನು ಕೂಡ ಮೇಲೆ ತಿಳಿಸಿದ ವಿಧಾನದ ಮೂಲಕ ಭರ್ತಿ ಮಾಡಿ. ಪ್ರತಿ ವಿಷಯದ ಸ್ಕ್ಯಾನ್ ಮಾಡಿದ ಪ್ರತಿಗೆ 530ರೂ. ನಿಗದಿಪಡಿಸಲಾಗಿದೆ. ಪ್ರತಿ ವಿಷಯದ ಮೌಲ್ಯಮಾಪನಕ್ಕೆ 1,670 ರೂ. ನಿಗದಿ ಮಾಡಲಾಗಿದೆ.