ಉಡುಪಿ, ಏಪ್ರಿಲ್ 6, 2024 – ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು ವಿಶೇಷ ಹೆಲ್ತ್ ಚೆಕ್ ಪ್ಯಾಕೇಜುಗಳನ್ನು ಪರಿಚಯಿಸುತ್ತಿದೆ. ಈ ವರ್ಷದ ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯ ‘ನನ್ನ ಆರೋಗ್ಯ, ನನ್ನ ಹಕ್ಕು,’ ಈ ವರ್ಷದ ವಿಶ್ವ ಆರೋಗ್ಯ ದಿನದ ವಿಷಯ ‘ನನ್ನ ಆರೋಗ್ಯ, ನನ್ನ ಹಕ್ಕು,’ ಜನರಿಗೆ ಆರೋಗ್ಯ ಸೇವೆಗಳನ್ನು ಪಡೆಯಲು ಮತ್ತು ಅವರ ಆರೋಗ್ಯವನ್ನು ನೋಡಿಕೊಳ್ಳಲು ಕೆಲವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರವಿದೆಯೆಂದು ತಿಳಿಸುತ್ತದೆ. ಈ ಆರೋಗ್ಯ ಪ್ಯಾಕೇಜ್‌ಗಳು ಸಮುದಾಯದ ವೈವಿಧ್ಯಮಯ ಆರೋಗ್ಯ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಕ್ರಮಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ.
ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ಮಾತನಾಡಿ, ” ಪ್ರಾರಂಭದಲ್ಲಿಯೇ ರೋಗಗಳ ಪತ್ತೆಯು ಅತ್ಯಂತ ಮಹತ್ವದ್ದಾಗಿದೆ. ಈ ಪ್ರಮುಖ ಅಗತ್ಯವನ್ನು ಗುರುತಿಸಿ ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿಯು ವಿವಿಧ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳನ್ನು ಪ್ರಾರಂಭಿಸಲು ಹೆಮ್ಮೆಪಡುತ್ತದೆ” ಎಂದು ಹೇಳಿದರು.
ಈ ಪ್ಯಾಕೇಜ್‌ಗಳು ವಿವಿಧ ಆರೋಗ್ಯದ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಪೂರೈಸುತ್ತವೆ, Basic Health Check (ಮೂಲಭೂತ ಆರೋಗ್ಯ ತಪಾಸಣೆ), ಪುರುಷರ ಸಮಗ್ರ ಆರೋಗ್ಯ ತಪಾಸಣೆ, ಮಹಿಳೆಯರ ಸಮಗ್ರ ಆರೋಗ್ಯ ತಪಾಸಣೆ (Executive Health Check), ಮಧುಮೇಹ ಆರೋಗ್ಯ ಪ್ಯಾಕೇಜ್ ಮತ್ತು ಹೃದಯ ಆರೋಗ್ಯ ಪ್ಯಾಕೇಜ್‌ಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್‌ಗಳು 08 ಏಪ್ರಿಲ್ 2024 ರಿಂದ 30 ಏಪ್ರಿಲ್ 2024 ರವರೆಗೆ ರಿಯಾಯಿತಿ ಶುಲ್ಕಗಳಲ್ಲಿ ಲಭ್ಯವಿವೆ.
ಅಪಾಯಿಂಟ್‌ಮೆಂಟ್‌ಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು 7259361555 ಅನ್ನು ಸಂಪರ್ಕಿಸಲು ಕೋರಲಾಗಿದೆ.
ಡಾ. ಟಿಎಂಎ ಪೈ ಆಸ್ಪತ್ರೆಯು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಮತ್ತು ಸಮುದಾಯದಲ್ಲಿ ರೋಗಗಳನ್ನು ತಡೆಗಟ್ಟುವ ಆರೋಗ್ಯ ಕ್ರಮಗಳ ಪ್ರಾಮುಖ್ಯತೆಯನ್ನು ಪ್ರೋತ್ಸಾಹಿಸಲು ಬದ್ಧವಾಗಿದೆ.