ಕಾರ್ಕಳ : ಏಪ್ರಿಲ್ 07:ಎಂ ಸಿ ಎಫ್ ಸಿ.ಎಸ್.ಆರ್ ಪ್ರಾಯೋಜಕತ್ವದ ಶೌಚಾಲಯ ಕಟ್ಟಡ ಹಸ್ತಾಂತರ ಹಾಗೂ ಅಷ್ಟಮ ವಾರ್ಷಿಕೋತ್ಸವ ಸಮಾರಂಭ 2024ರ ಕಾರ್ಯಕ್ರಮ ಎಪ್ರಿಲ್ 06 ರಂದು ವಿಜೇತ ವಿಶೇಷ ಶಾಲೆ ಅಯ್ಯಪ್ಪನಗರದಲ್ಲಿ ವಿಜೃಂಭಣೆಯಿಂದ ನೆರವೇರಿತು
ಎಂ ಸಿ ಎಫ್ ಸಿ.ಎಸ್.ಆರ್ ಪ್ರಾಯೋಜಕತ್ವದ ಶೌಚಾಲಯ ಕಟ್ಟಡದ ಉದ್ಘಾಟನೆಯನ್ನು ಎಂ ಸಿ ಎಫ್ ಮಂಗಳೂರು ಜಂಟಿ ಮುಖ್ಯ ಪ್ರಬಂಧಕರಾದ ಚೇತನ್ ರೋಹನ್ ಮೆಂಡೋನ್ಸ ಹಾಗೂ ನಿವೃತ್ತ ಸಿ ಎ ಕಮಲಾಕ್ಷ ಕಾಮತ್ ಇವರು ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ವಿಜೇತ ವಿಶೇಷ ಶಾಲಾ ಗೌರವಾಧ್ಯಕ್ಷರು ಹಾಗೂ ಶ್ರೀ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ರಿ. ಅಧ್ಯಕ್ಷರು ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಇವರು ವಹಿಸಿದ್ದು, ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿ, ಸಿ ಎಸ್ ಆರ್ ನಿಧಿಯಲ್ಲಿ ಶವ್ಚಾಲಯ ನಿರ್ಮಾಣ ಮಾಡಿ ಕೊಟ್ಟ ಎಂ ಸಿ ಎಫ್ ಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಬಂಟ್ಸ್ ಸಂಘ ಮುಂಬೈ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ್ ಶೆಟ್ಟಿ ಬಂಟ್ಸ್ ಸಂಘ ಮುಂಬೈ ಜತೆ ಕಾರ್ಯದರ್ಶಿಗಳಾದ ಗಿರೀಶ್ ಶೆಟ್ಟಿ ತೆಳ್ಳಾರು ಉದ್ಯಮಿಗಳಾದ ನಿತ್ಯಾನಂದ ಪೈ, ಇನ್ನಾ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ರಾಜೇಂದ್ರ ಭಟ್ ಕೆ, ಜನಪ್ರಿಯ ರೈಸ್ ಮಿಲ್ ಮಾಲ್ಹಕರಾದ ಮಂಜುನಾಥ್ , ಎಂ ಸಿ ಎಫ್ ಅಸಿಸ್ಟೆಂಟ್ ಮ್ಯಾನೇಜರ್ ಸತ್ಯನಾರಾಯಣ್ ಮದ್ಯಸ್ಥ , ಶಾಲಾ ಅಧ್ಯಕ್ಷರು ರತ್ನಾಕರ್ ಅಮೀನ್ ಶ್ರೀ ದುರ್ಗಾ ವಿದ್ಯಾ ಸಂಘ ಟ್ರಸ್ಟ್ ರಿ. ನ ಅಧ್ಯಕ್ಷರಾದ ಕೆ ರಾಧಾಕೃಷ್ಣ ಶೆಟ್ಟಿ, ವಿಕಲಚೇತನರ ಇಲಾಖೆಯ ನಿವೃತ್ತ ಅಧಿಕಾರಿಗಳಾದ ನಿರಂಜನ್ ಭಟ್, ಹಿರಿಯರು ಹಾಗೂ ಉದ್ಯಮಿಗಳಾದ
ಅಪ್ಪು ರಾಯ ಕಿಣಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೆಚ್ ಆರ್ ಎಂ ಸಿ ಎಫ್ ಪಣಂಬೂರು ಮಂಗಳೂರು ಇದರ ಜಂಟಿ ಮುಖ್ಯಪ್ರಭಂದಕರು ಚೇತನ್ ರೋಹನ್ ಜೋಸೆಫ್ ಮೆಂಡೋನ್ಸ, ನಿವೃತ್ತ ಸಿಎ ಕಮಲಾಕ್ಷ ಕಾಮತ್, ಕನ್ನಡಪ್ರಭಾ ಪತ್ರಕರ್ತರಾದ ಸುಭಾಷ್ ಚಂದ್ರ ವಾಗ್ಲೆ, ಇವರನ್ನು ಗೌರವಿಸಲಾಯಿತು
ಸಂಸ್ಥೆಯ ಸಿಬ್ಬಂದಿಗಳಾದ ಕು.ಶ್ರುತಿ, ಕು.ವಿದ್ಯಾ, ಸುಲತಾ ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಕು. ನಳಿನಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ವಂದಿಸಿದರು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಜೇತ ವಿಶೇಷ ಶಾಲಾ ಮಕ್ಕಳಿಂದ ನೇತಾಜಿ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು.
ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಇವರ ನಿರ್ದೇಶನದಲ್ಲಿ ಶ್ರೀ ವಿಜಯ್ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ಶ್ರೀ ದುರ್ಗಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಯಕ್ಷಗಾನ ಪ್ರಸಂಗವು ನೆರವೇರಿತು.
ಬೊಳ್ಳಿ ಕಲಾವಿದರ ತಂಡದ ಪ್ರಾಯೋಜಕತ್ವದಲ್ಲಿ ಜೋಕ್ಲಾಟಿಗೆ ಬುಡ್ಲೆ ನಾಟಕ ಪ್ರದರ್ಶನ ನೆರವೇರಿತು.