ಉಡುಪಿ, ಏಪ್ರಿಲ್ 06: ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ, ಜಿಲ್ಲಾ ಯುವ ಸಬಲೀಕರಣ & ಕ್ರೀಡಾ ಇಲಾಖೆ ಉಡುಪಿ,ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ( ಉಡುಪಿ ಜಿಲ್ಲಾ ಲೀಡ್ ಕಾಲೇಜು), ಚುನಾವಣಾ ಸಾಕ್ಷರತಾ ಸಂಘ, ಎನ್.ಎಸ್.ಎಸ್. ಕ್ರೀಡಾ ವಿಭಾಗ, ರೇಂಜರ್ಸ್ ಘಟಕ, ರೆಡ್ ಕ್ರಾಸ್ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಇವರ ಸಂಯುಕ್ತ ಆಶ್ರಯದಲ್ಲಿ ಮತದಾರರ ಜಾಗೃತಿ ಜಾಥಾ ಮತ್ತು ಅರಿವು ಕಾರ್ಯಕ್ರಮವು ಏಪ್ರಿಲ್ 8 ರಂದು ಬೆಳಗ್ಗೆ 9.15 ಕ್ಕೆ ನಗರದ ಡಾ. ಜಿ ಶಂಕರ್ ಕಾಲೇಜಿನಿಂದ ಆರಂಭಗೊಳ್ಳಲಿದೆ.
ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಜಾಥಾ ಗೆ ಚಾಲನೆ ನೀಡಲಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಶ್ ಬಾಯಲ್ ಮತದಾರರ ಪ್ರತಿಜ್ಞಾ ವಿಧಿ ಭೋದಿಸಲಿದ್ದಾರೆ .
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಭಾಸ್ಕರ ಎಸ್ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಐ. ಪಿ . ಗಡಾಧ್, ಜಿಲ್ಲಾ ಶಸ್ತ್ರ ಚಿಕಿತ್ಸಾಧಿಕಾರಿ ಡಾ. ಹೆಚ್ ಅಶೋಕ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ. , ಚುನಾವಣಾ ಸಾಕ್ಷರತಾ ಸಂಘದ ಸಂಚಾಲಕ ಮಂಜುನಾಥ್, ಎನ್.ಎಸ್.ಎಸ್ ಘಟಕ -1 ರ ಯೋಜನಾಧಿಕಾರಿ ಪ್ರೊ. ನಿಕೇತನ , ಎನ್.ಎಸ್.ಎಸ್ ಘಟಕ -2 ರ ಯೋಜನಾಧಿಕಾರಿ ವಿದ್ಯಾ .ಡಿ , ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್, ರೇಂಜರ್ಸ್ ಘಟಕ 1 ರ ಸಂಚಾಲಕಿ ಜ್ಯೋತಿ ಲಕ್ಷ್ಮಣ ರಾವ್ ಜನ್ನೆ , ರೇಂಜರ್ಸ್ ಘಟಕ -2 ರ ಸಂಚಾಲಕಿ ರಮ್ಯ ವಿ, ರೆಡ್ ಕ್ರಾಸ್ ಘಟಕದ ಸಂಚಾಲಕಿ ಡಾ. ದಿವ್ಯ ಎಂ.ಎಸ್ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.