ಬೆಂಗಳೂರು: ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಬೆಡಗಿ ಸೋನು ಗೌಡ ಅವರನ್ನು ಬಂಧಿಸಿ ಪರಪ್ಪನ ಜೈಲಿಗೆ ಕಳುಹಿಸಲಾಗಿತ್ತು. ಸದ್ಯ ಸೋನು ಶ್ರೀನಿವಾಸ್ ಗೌಡಗೆ ಕೋರ್ಟ್ ರಿಲೀಫ್ ನೀಡಿದೆ.
ಕಾನೂನು ಬಾಹಿರವಾಗಿ ಮಗವನ್ನು ದತ್ತು ಪಡೆದಿದ್ದ ಸೋನು ಗೌಡ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ಮಾರ್ಚ್ 22ರಂದು ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡರನ್ನು ಅರೆಸ್ಟ್ ಮಾಡಿದ್ದರು.
ಕಾಚಾಪುರದ ಬಡ ದಂಪತಿ ದುಡಿಯಲು ಅಂತಾ ಬೆಂಗಳೂರಿಗೆ ಹೋಗಿದ್ದು, ಅಲ್ಲೇ ಮಗು ಪೋಷಕರನ್ನ ಸೋನು ಪರಿಚಯ ಮಾಡಿಕೊಂಡಿದ್ದರು. ಮಗುವನ್ನ ಅಕ್ರಮವಾಗಿ ದತ್ತು ಪಡೆದಿರೋದು ಗೊತ್ತಾಗಿದೆ. ಆದರೆ ಕೇಸ್ ದಾಖಲಾಗ್ತಿದ್ದಂತೆ ಮಗುವಿನ ಪೋಷಕರು ಮಾತ್ರ ಉಲ್ಟಾ ಹೊಡೆದಿದ್ದರು.
ಇದೀಗ ಸೋನು ಶ್ರೀನಿವಾಸ್ ಗೌಡಗೆ PDJ ಕೋರ್ಟ್ನಿಂದ ಜಾಮೀನು ತೀರ್ಪು ಹೊರಡಿಸಲಾಗಿದೆ. ಇನ್ನು, ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಎಂಬುವವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಅವರು ವಾದ ಮಂಡಿಸಿದ್ದರು.ಶ್ಯೂರಿಟಿ ಜೊತೆಗೆ 1 ಲಕ್ಷ ಬ್ಯಾಂಡ್ ಷರುತ್ತ ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.