ವಿಜಯಪುರ:ಏಪ್ರಿಲ್ 04: ವಿಜಯಪುರದಲ್ಲಿ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ ಕೊಳವೆ ಬಾವಿಗೆ ಬಿದ್ದಿದೆ, ಮಗು ರಕ್ಷಣೆಗೆ SDRF, ಅಗ್ನಿಶಾಮಕ ದಳ, ಪೊಲೀಸರ ಹರಸಾಹಸ ಮಾಡುತ್ತಿದ್ದಾರೆ. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇತ್ತೀಚಿಗಷ್ಟೆ ಕೊರೆಸಲಾಗಿದ್ದ 180 ಅಡಿ ಆಳದ ಕೊಳವೆ ಬಾವಿಗೆ ಮೋಟರ್ ಇಳಿಸಲು ತಾತನ ಜೊತೆ ಸಾತ್ವಿಕ್ ಬಂದಿದ್ದಾಗ ದುರ್ಘಟನೆ ಸಂಭವಿಸಿದೆ. ಆಯಾತಪ್ಪಿ ತಲೆಕೆಳಗಾಗಿ 16 ಅಡಿ ಆಳದಲ್ಲಿ ಮಗು ಸಾತ್ವಿಕ್ ಇದ್ದಾನೆ. ಸಿಸಿ ಕ್ಯಾಮರಾದಲ್ಲಿ ಕ್ಯಾಮೆರಾದಲ್ಲಿ ಮಗುವಿನ ಚಲನವಲನ ಸೆರೆಯಾಗಿದೆ.
ಆಕ್ಸಿಜನ್ ಪೂರೈಸಿ SDRF ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.ವಿಫಲ ಕೊಳವೆ ಬಾವಿಗೆ ಬಿದ್ದಿರುವ ಲಚ್ಯಾಣದ ಸಾತ್ವಿಕ್ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಮಗು ಸುರಕ್ಷಿತವಾಗಿದೆ, ಉಸಿರಾಟಕ್ಕೆ ಸಮಸ್ಯೆ ಆಗದಂತೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಆದರೆ 10 ಅಡಿ ಆಳದ ಬಳಿಕ ಕಾಣಿಸಿಕೊಂಡಿರುವ ಭಾರಿ ಗಾತ್ರದ ಬಂಡೆಗಲ್ಲು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ.
ಸಚಿವ ಎಂ ಬಿ ಪಾಟೀಲ್ ಮಾಹಿತಿ
ಬಾಲಕ ಸಾತ್ವೀಕ್ ಬದುಕಿ ಬರಲಿ ಎಂದು ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ಗ್ರಾಮದ ಯುವಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಹಿತಿ ಹಂಚಿಕೊಂಡರುವ ಸಚಿವ ಎಂಬಿ ಪಾಟೀಲ್ ಅವರು, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ 2ವರ್ಷದ ಮಗುವೊಂದು ಕೊಳವೆ ಬಾವಿಗೆ ಬಿದ್ದ ಘಟನೆ ನನ್ನ ಮನಕಲುಕಿದೆ. ಮಗುವನ್ನು ರಕ್ಷಿಸಲು ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದು ಆ ಬಗ್ಗೆ ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತಿರುವೆ. ಈ ಸಂದರ್ಭದಲ್ಲಿ ಮಗುವು ಸುರಕ್ಷಿತವಾಗಿ ಪೋಷಕರ ಮಡಿಲು ಸೇರುವಂತಾಗಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆ ಎಂದು ಬರೆದುಕೊಂಡಿದ್ದಾರೆ.