ಮಣಿಪಾಲ ; ಏಪ್ರಿಲ್ 01: ಮಣಿಪಾಲ ಸರಳೆಬೆಟ್ಟ್ಟು ಇಲ್ಲಿನ ರಾಮಮಂದಿರದ ಸಮೀಪ ಸುನಿತಾ ಡಿಸೋಜಾ ರವರ ಮನೆಗೆ ರಾತ್ರಿ ಹೊತ್ತಿನಲ್ಲಿ ಮನೆಯ ಕೋಳಿ ಗೂಡಿಗೆ ಕನ್ನ ಹಾಕಿ ಎರಡು ಕೋಳಿಯನ್ನ ತಿಂದು ತೆಗೆದೆ.ಇದು ಆಹಾರ ಅರಸಿ ಕೋಳಿಗೂಡಿಗೆ ಲಗ್ಗೆ ಇಟ್ಟ ಚಿರತೆಯ ವಿಡಿಯೋ ವೈರಲ್ ಆಗಿದೆ.
ಒಂದು ಕೋಳಿಯನ್ನ ಹಾಗೆ ಬಿಟ್ಟು ಪಲಾಯನ ಗೈದಿದೆ. ಈ ಸದ್ಯ ಮಣಿಪಾಲದ ಸುತ್ತಮುತ್ತ ಪ್ರದೇಶಗಳಾದ ಸೆರಳೆಬೆಟ್ಟು ಕೋಡಿ, ಎಂಡ್ ಪಾಯಿಂಟ್. ಕೆಳಪರ್ಕಕಲ. ಸಣ್ಣಕ್ಕಿ ಬೆಟ್ಟು. ಪರ್ಕಳ ಗ್ಯಾಟ್ಸನ್ ಪರಿಸರ. ಮೊದಲಾದ ಕಡೆ ಸಂಚಾರ ನಡೆಸುತ್ತಿರುವ ಚಿರತೆಯ ಹಾವಳಿ ಹೆಚ್ಚಾಗಿದೆ.. ಕೆಲವರ ಪ್ರಕಾರ ಎರಡು-ಮೂರು ಚಿರತೆ ಇದೆ ಎನ್ನುತ್ತಾರೆ..
ಇತ್ತೀಚೆಗೆ ಕೆಳಪರ್ಕದಲ್ಲಿ ಚಿರತೆಕಂಡಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಸರಳೆಬೆಟ್ಟು ಕೋಡಿ ಪರಿಸರದಲ್ಲಿ ಬೋನನ್ನು ಇರಿಸಿದರು ಚಿರತೆಯನ್ನು ಬಂಧಿಸುವ ಕ್ರಮ ಯಶಸ್ವಿಯಾಗಿಲ್ಲ.
ಎಂದು ಸರಳೆ ಬೆಟ್ಟು ಗಣೇಶ್ ರಾಜ್ ತಿಳಿಸಿದ್ದಾರೆ ಮತ್ತೆ ಈ ಭಾಗದಲ್ಲಿ ಚಿರತೆ ಕಾಣಿಸುತ್ತಿರುವುದು ಜನರಲ್ಲಿ ಆತಂಕವು ಹೆಚ್ಚಾಗಿದೆ