ಬೆಂಗಳೂರು :ಮಾರ್ಚ್ .31: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಿತ್ರನಟ, ರಂಗಭೂಮಿ ಕಲಾವಿದ, ಸಾಮಾಜಿಕ, ಪರಿಸರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಯೇಸು ಪ್ರಕಾಶ್ ಕಲ್ಲುಕೊಪ್ಪ(58) ನಿನ್ನೆ ಮಾರ್ಚ್ 30 ರಂದು ನಿಧನರಾಗಿದ್ದಾರೆ .
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯೇಸುಪ್ರಕಾಶ್ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.. ಆದರೆ ಇಂದು ಚಿಕಿತ್ಸೆಗೆ ಫಲಕಾರಿಯಾಗದೆ ನಿಧನರಾಗಿದ್ದಾರೆ
ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರಕಾಶ್ ಹೆಬ್ಬಗೋಡು ಎಂದೇ ಗುರುತಿಸಿಕೊಂಡಿದ್ದ ಯೇಸುಪ್ರಕಾಶ್, ಪುನೀತ್ ರಾಜಕುಮಾರ್, ಯಶ್, ದರ್ಶನ್ ಖ್ಯಾತ ನಟರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಅಲ್ಲದೇ ನೀನಾಸಂ ಜೊತೆ ರಂಗಭೂಮಿ ನಾಟಕಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ. ನಾಳೆ ಭಾನುವಾರ ಕಲ್ಲುಕೊಪ್ಪದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಕುಟುಂಬಸ್ಥರು ತಿಳಿಸಿದ್ದಾರೆ.