ಉಡುಪಿ : ಮಾರ್ಚ್ 30 :ಉಡುಪಿ : ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಮೆಡಿಕಲ್ ಶಾಪ್, ಅಂಗಡಿ, ಬಾರ್ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂದಿಸಲಾಗಿದೆ
ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿ ಗ್ರಾಮದ ಶಾನ್ ಮೆಡಿಕಲ್ ಶಾಪ್, ಬೈಂದೂರು ಠಾಣಾ ವ್ಯಾಪ್ತಿಯ ನಾಗೂರು ಎಂಬಲ್ಲಿ ಶ್ರೇಷ್ಠ ಮೆಡಿಕಲ್ ಶಾಪ್ ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯ ಖಾರ್ವಿಕೇರಿ ರಸ್ತೆಯಲ್ಲಿರುವ ಮಹಾಂಕಾಳಿ ಜನರಲ್ ಸ್ಟೋರ್ ಹಾಗೂ ಕೋಟಾ ಠಾಣಾ ವ್ಯಾಪ್ತಿಯ ಕೋಟಾ ಮೂರುಕೈ ಯಲ್ಲಿರುವ ವಿವೇಕ ಮೆಡಿಕಲ್ ಶಾಪ್, ಹಳ್ಳಾಡಿಯಲ್ಲಿರುವ ತಲ್ಲೂರು ಬಾರ್& ರೆಸ್ಟೋರೆಂಟ್, ಅಯ್ಯಂಗಾರ್ ಬೇಕರಿ, ಸಾಯಿಬ್ರಕಟ್ಟೆಯಲ್ಲಿರುವ ನಂದಿಕೇಶ್ವರ ಹೊಟೇಲಿನಲ್ಲಿ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ 1) ಅರ್ಷಿತ್ ಅವಿನಾಶ್ ದೋಡ್ರೆ (23) ನಂತೂರು, ಮಂಗಳೂರು. 2) ರಿಲ್ವಾನ್ @ ರಿಝ್ವಾನ್ (24) ಪಡುವರಿ ಗ್ರಾಮ, ಬೈಂದೂರು ತಾಲೂಕು 3) ಮಹಮ್ಮದ್ ಅರ್ಬಾಝ್ (23) ಯಡ್ತರೆ ಗ್ರಾಮ ಬೈಂದೂರು ತಾಲೂಕು ಎಂಬವರನ್ನು ದಿನಾಂಕ 29/03/2024 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ ಒಟ್ಟು 36,000 ರೂಪಾಯಿ ಮೌಲ್ಯದ ಹಣವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ KA 20 EY 0080 ನೇ ಪಲ್ಸರ್ ಮೋಟಾರು ಸೈಕಲನ್ನು ಹಾಗೂ 3 ಮೊಬೈಲ್ ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ರವರಾದ ಶ್ರೀ ಹರೀಶ್ ಆರ್ (ಕಾ & ಸು), ಶ್ರೀ ಬಸವರಾಜ ಕನಶೆಟ್ಟಿ (ತನಿಖೆ) ಹಾಗೂ ಸಿಬ್ಬಂದಿಗಳಾದ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ್, ನಾಗರಾಜ, ದಿನೇಶ್ ಹಾಗೂ ನಿತಿನ್ ಇವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.