ಮಣಿಪಾಲ : ಮಾರ್ಚ್ 28 : ಸಂಶೋಧನ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಮುಖ ಹೆಜ್ಜೆಯಾಗಿ ಮಾಹೆಯ ಘಟಕವಾದ ಮಣಿಪಾಲ್ ಸೆಂಟರ್ ಫಾರ್ ಬಯೊಥೆರಾಪಿಟಿಕ್ಸ್ ರೀಸರ್ಜ್‌ನಲ್ಲಿ ಅತ್ಯಾಧುನಿಕ ಏಜಿಲೆಂಟ್ ಬಯೊ-ಎಲ್‌ಸಿ ಇನ್‌ಫನೈಟಿ II ವಿಶ್ಲೇಷಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬಯೋ-ಎಲ್‌ಸಿ ವ್ಯವಸ್ಥೆಯನ್ನು ಮಾಹೆಯ ಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಮತ್ತು ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿಗಳಾದ ಡಾ. ಶರತ್ ಕೆ. ರಾವ್ ಉದ್ಘಾಟಿಸಿದರು. ಎಜಿಲೆಂಟ್ ಟೆಕ್ನಾಲಜೀಸ್ ಇಂಡಿಯ ಪ್ರೈ ಲಿ.,ನ ಮಾರುಕಟ್ಟೆ ಅಭಿವೃದ್ಧಿ ವ್ಯವಸ್ಥಾಪಕರಾದ ಡಾ. ವಾದಿರಾಜ ಭಟ್, ಮಾಹೆಯ ಡೆರೆಕ್ಟೋರೇಟ್ ಆಫ್ ರೀಸರ್ಚ್‌ನ ನಿರ್ದೇಶಕ ಡಾ. ಬಿ. ಎಸ್. ಸತೀಶ್ ರಾವ್ ಮುಖ್ಯ ಅತಿಥಿಗಳಾಗಿದ್ದರು.
ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಅವರು ತಮ್ಮ ಉದ್ಘಾಟನ ಭಾಷಣದಲ್ಲಿ, ‘ಈ ಅತ್ಯಾಧುನಿಕ ಸೌಲಭ್ಯವನ್ನು ವಿಜ್ಞಾನಿಗಳು, ಸಂಶೋಧಕರು ಬಳಸಿಕೊಳ್ಳಬೇಕು. ಇದನ್ನು ಕೇವಲ ವರ್ತಮಾನ ಕಾಲದ ಅಗತ್ಯಕ್ಕಾಗಿ ಸ್ಥಾಪಿಸಲಾಗಿಲ್ಲ. ಭವಿಷ್ಯದ ವಿಜ್ಞಾನದ ಸಂಶೋಧನ ಕ್ಷೇತ್ರಕ್ಕೂ ಮತ್ತು ಉಪಕ್ರಮಗಳಿಗೆ ಬಲವಾದ ಅಡಿಪಾಯವನ್ನು ಹಾಕುವಂತಾಗಲಿ ಇದರಿಂದ ಅಂತರಶಿಸ್ತೀಯ ಸಹಯೋಗವನ್ನು ಉತ್ತೇಜಿಸುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಭೂದೃಶ್ಯವನ್ನು ರೂಪಿಸುವ ಪ್ರಗತಿಯನ್ನು ಸಕ್ರಿಯಗೊಳಿಸುತ್ತದೆ’ ಎಂದರು.
ಡಾ. ಶರತ್ ರಾವ್ ಅವರು ಮಾತನಾಡುತ್ತ, ‘ಸಂಶೋಧನ ಕ್ಷೇತ್ರದಲ್ಲಿ ಮಾಹೆ ಮಹತ್ತ್ವದ ಕೊಡುಗೆಯನ್ನು ನೀಡುತ್ತ ಬಂದಿದೆ. ನಿರಂತರವಾದ ಸಂಶೋಧನ ಪ್ರಕ್ರಿಯೆಯನ್ನು ಉತ್ತೇಜಿಸುವುದಕ್ಕಾಗಿ ‘ಮಾಹೆ ಶೀಘ್ರದಲ್ಲೇ ಸಂಶೋಧನ ಪಾರ್ಕ್’ನ್ನು ನಿರ್ಮಿಸುವತ್ತ ಗಮನ ಹರಿಸಲಿದೆ. ಸಂಶೋಧನೆಯ ಉತ್ಕೃಷ್ಟತೆಯ ನಮ್ಮ ನಿರಂತರ ಅನ್ವೇಷಣೆ , ಸುಧಾರಿತ ಸೌಲಭ್ಯಗಳನ್ನು ಪೂರೆಕೆ ಮಾಡುವುದರ ಮೂಲಕ ಸಂಶೋಧನ ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಹೆ ಮುಂದುವರಿಸಲಿದೆ’ ಎಂದರು.
ಡಾ ವಾದಿರಾಜ್ ಭಟ್ ಮಾತನಾಡಿ , ‘ಹೊಸದಾಗಿ ಸ್ಥಾಪಿಸಲಾದ ಬಯೊ-ಎಲ್‌ಸಿ ಇನ್‌ಫನೈಟಿ II ವ್ಯವಸ್ಥೆಯು ಜೀವ-ಜಡ ಶಸ್ತ್ರಕ್ರಿಯೆ [ಬಯೋ-ಇನರ್ಟ್ ಆಪರೇಶನ್]ಗೆ ಅನುಕೂಲವಾಗಲಿದೆ. ಅಲಿಗೋನ್ಯೂಕ್ಲಿಯೋಟೈಡ್‌ಗಳು, ಪೆಪ್‌ಟೈಡ್‌ಗಳು, ನ್ಯೂರೋಟ್ರಾನ್ಸ್‌ಮಿಟರ್ಸ್, ಮೆಟಾಬಾಲೈಟ್ಸ್ ಮುಂತಾದ ಸೂಕ್ಷ್ಮ ಜೆವಿಕ ಮಾದರಿಗಳ ವಿಶ್ಲೇಷಣೆಯಲ್ಲಿ ಇದು ಪ್ರಯೋಜನಕಾರಿಯಾಗಿದೆ’ ಎಂದರು.
ಮಾಹೆಯ ವಿವಿಧ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಗಳ ಮುಖ್ಯಸ್ಥರು ಮತ್ತು ಬೋಧಕ ವರ್ಗದವರು ಉಪಸ್ಥಿತರಿದ್ದರು. ಮಣಿಪಾಲ್ ಸೆಂಟರ್ ಫಾರ್ ಬಯೊಥೆರಾಪಿಟಿಕ್ಸ್ ರೀಸರ್ಜ್‌ನ ಪ್ರಾಧ್ಯಾಪಕ ಮತ್ತು ಸಂಯೋಜಕರಾದ ಡಾ. ರವಿರಾಜ ಎನ್. ಎಸ್. ಅವರು ಸ್ವಾಗತ ಭಾಷಣ ಮಾಡುತ್ತಾ , ‘ಸಂಶೋಧನ ಕ್ಷೇತ್ರದಲ್ಲಿ ಮಾಹೆಯು ಪೂರ್ಣ ತೊಡಗಿಸಿಕೊಳ್ಳುವಿಕೆಯು ‘ಸಂಶೋಧನಾ ಶ್ರೇಷ್ಠತೆಯ ವರ್ಷ’ ದ ಆಚರಣೆಯನ್ನು ಇನ್ನಷ್ಟು ಇಮ್ಮಡಿಗೊಳಿಸಲಿದೆ . ಮಾಹೆಯ ವಿಜ್ಞಾನಿಗಳ ಮತ್ತು ಸಂಶೋಧಕರ ಸಮೂಹ ಪ್ರಯತ್ನದಿಂದಾಗಿ ಸಂಶೋಧನ ಪ್ರಕ್ರಿಯೆಯು ನಿರಂತರವಾಗಿ ಮುಂದುವರಿದಿದೆ’ ಎಂದರು.
ಈ ಕೋರ್ ಸೌಲಭ್ಯದ ಸಂಯೋಜಕರಾದ ಡಾ. ಸೌವಿಕ್ ಡೇ, ಅಲ್ಟ್ರಾ-ಎಚ್ ಪಿ ಎಲ್ ಸಿ ಸಿಸ್ಟಮ್‌ನ ಪರಿವರ್ತಕ ಪರಿಣಾಮವನ್ನು ಒತ್ತಿಹೇಳಿದರು, ಸಾಂಪ್ರದಾಯಿಕ ಎಚ್ ಪಿ ಎಲ್ ಸಿ ಗಳ ಮೇಲೆ ಅದರ ವರ್ಧಿತ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಎತ್ತಿ ತೋರಿಸಿದರು.
ಮಾಹೆಯ ಮಣಿಪಾಲ್ ಸೆಂಟರ್ ಫಾರ್ ಬಯೊಥೆರಾಪಿಟಿಕ್ಸ್ ರೀಸರ್ಚ್‌ನ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಉಪಾಧ್ಯ ಧನ್ಯವಾದ ಸಮರ್ಪಿಸಿದರು. ಅದಿತಿ ಖಾಮಮ್‌ಕರ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ನೂತನ ಘಟಕದ ಉದ್ಘಾಟನೆಯು ಸಂಶೋಧಕರಿಗೆ ಮತ್ತು ವಿದ್ವಾಂಸರಿಗೆ ಹೆಮ್ಮೆಯ ಕ್ಷಣವನ್ನು ಗುರುತಿಸಿತು, ನವೀನ ಸಂಶೋಧನೆಯನ್ನು ಮುಂದಕ್ಕೆ ಕೊಂಡೊಯ್ಯುವ ಮತ್ತು ಸಂಶೋಧನಾ ಶ್ರೇಷ್ಠತೆಯ ಭವಿಷ್ಯಕ್ಕಾಗಿ ಭರವಸೆಯ ಪಥವನ್ನು ಹೊಂದಿಸುವ ಮಾಹೆಯ ಬದ್ಧತೆಯನ್ನು ಗಟ್ಟಿಗೊಳಿಸಲಿದೆ.