ಬೈಕಂಪಾಡಿ:ಮಾರ್ಚ್ 28 :ಇಲ್ಲಿನ ಕೈಗಾರಿಕಾ ಪ್ರಾಂಗಣದಲ್ಲಿರುವ ಕೋಳಿ ಮಾಂಸ ತ್ಯಾಜ್ಯದ ಹುಡಿಯಿಂದ ಪಶು, ಪಕ್ಷಿಗಳ ಆಹಾರ ತಯಾರಿಕಾ ಗೋದಾಮಿಗೆ ಬೆಂಕಿ ತಗುಲಿ ಲಕ್ಷಾಂತರ ರೂ.ಹಾನಿಯಾದ ಘಟನೆ ನಡೆದಿದೆ.
ಶ್ವಾನ, ಬೆಕ್ಕು ಸಹಿತ ಪ್ರಾಣಿ ಸಾಕಾಣಿಕೆಗೆ ಬೇಕಾಗುವ ಆಹಾರ ತಾಯಾರಿಕೆ ಹಾಗೂ ಶೇಖರಣಾ ಗೋದಾಮು ಇದಾಗಿದೆ. ಇಂದು ಮುಂಜಾನೆ 4 ಗಂಟೆಯಿಂದ ಸತತ ನಾಲ್ಕು ಗಂಟೆಗಳ ಕಾಲ ಅಗ್ನಿ ಶಾಮಕ ದಳ ಶ್ರಮಿಸಿ ಬೆಂಕಿ ತಹಬದಿಗೆ ತಂದಿದೆ.
ಎನ್ ಎಂಪಿಟಿ, ಎಂಆರ್ ಪಿಎಲ್, ರಾಜ್ಯ ಅಗ್ನಿಶಾಮಕ ದಳ, ಎಂಸಿಎಫ್ ಸಹಿತ ಆರಕ್ಕೂ ಅಧಿಕ ಅಗ್ನಿ ಶಾಮಕ ವಾಹನ ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಶ್ರಮಿಸಿದರು. ಲಕ್ಷಾಂತರ ರೂ.ಮೌಲ್ಯದ ಸಂಗ್ರಹವಿದ್ದ ಸರಕುಗಳು ಬೆಂಕಿಗೆ ಆಹುತಿಯಾಗಿ ನಷ್ಟವಾಗಿದೆ