ಮಲ್ಪೆ:ಮಾರ್ಚ್ 27:ಮಲ್ಪೆ ಬೀಚ್ನಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಒಂದೂವರೆ ವರ್ಷದ ಮಗುವನ್ನು ಮುಳುಗು ತಜ್ಞ ಈಶ್ವರ ಮಲ್ಪೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಬೀಚ್ಗೆ ಬಂದ ಮೈಸೂರು ಮೂಲದ ದಂಪತಿ ಸ್ನಾನಕ್ಕೆಂದು ಮಗುವಿನೊಂದಿಗೆ ನೀರಿಗಿಳಿದಿದ್ದರು. ಸ್ನಾನ ಮಾಡುತ್ತಿರುವ ವೇಳೆ ಮಗು ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಇದನ್ನು ಕಂಡ ಮಲ್ಪೆ ಬೀಚ್ ಆಟೋರಿಕ್ಷಾ ನಿಲ್ದಾಣದ ಚಾಲಕರು ಈಶ್ವರ ಮಲ್ಪೆ ಅವರ ಆ್ಯಂಬುಲೆನ್ಸ್ ವರೆಗೆ ಮಗುವನ್ನು ಅಟೋರಿಕ್ಷಾದಲ್ಲಿ ಕರೆತಂದರು.
ಕೂಡಲೇ ಕಾರ್ಯಪ್ರವೃತ್ತರಾದ ಈಶ್ವರ್ ತಂಡ ಮಗುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. ಸದ್ಯ ಮಗು ಚೇತರಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದೆ.