ನಂದಳಿಕೆ :ಮಾರ್ಚ್ 26:ಐತಿಹಾಸಿಕ 4 ಸ್ಥಾನ ಸಿರಿ ಕ್ಷೇತ್ರಗಳ ತವರೂರು ಸತ್ಯದ ಸಿರಿಗಳ ಪುಣ್ಯಕ್ಷೇತ್ರ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸನ್ನಿಧಿಯಲ್ಲಿ ಸಿರಿ ಜಾತ್ರೆ ಮಹೋತ್ಸವ ಸೋಮವಾರ ದಂದು ವಿಜೃಂಭಣೆಯಿಂದ ನೆರವೇರಿತು.
ನಂದಳಿಕೆ ಚಾವಡಿ ಅರಮನೆಯಲ್ಲಿ ವಿವಿಧ ವಾದ್ಯ, ಚಂಡೆ, ಕೊಂಬು ಕಹಳೆ, ಹಾಗೂ ಹಲವಾರು ಕುಣಿತ ನೃತ್ಯ , ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ರಾತ್ರಿ 9:00ಗೆ ಚಾವಡಿ ಅರಮನೆಯಿಂದ ದೈವ ದೇವರು ಗಳಿಗೆ ಪ್ರಾರ್ಥನೆ ಸಲ್ಲಿಸಿ ಹೆಗ್ಗೆಯವರ ಆಗಮನದ ಪರಂಪರಾಗತ ಅದ್ದೂರಿಯ ಮೆರವಣಿಗೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಸೇರಿದರು. ನಂತರ ಅಯನೋತ್ಸವ ಬಲಿ , ಕೆರೆ ದೀಪೋತ್ಸವ, ಕಟ್ಟೆ ಪೂಜಾ ಮಹೋತ್ಸವ ಸತ್ಯದ ಸಿರಿಗಳ ಮೂಲ ಕ್ಷೇತ್ರ ಶ್ರೀ ಆಲಡೆ ಸನ್ನಿಧಾನದಲ್ಲಿ ಶ್ರೀ ಕುಮಾರ ,ಅಬ್ಬಗ- ದಾರಗ , ಸಿರಿ, ದರ್ಶನ ಕ್ಷೇತ್ರದಲ್ಲಿ ನಡೆಯಿತು. ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನಂದಳಿಕೆ ಚಾವಡಿ ಅರಮನೆ ಅನುವಂಶಿಕ ಆಡಳಿತ ಮೊಕ್ತೇಸರ ಯನ್. ಸುಂದರರಾಮ್ ಹೆಗ್ಡೆ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಗ್ರಾಮಸ್ಥರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು