ಕೊಲ್ಲಂ:ಮಾರ್ಚ್ 25:ಜಾತ್ರೆಯ ರಥದ ಚಕ್ರದಡಿ ಬಿದ್ದು ಐದು ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಕೇರಳದ ಕೊಲ್ಲಂನಲ್ಲಿ ಭಾನುವಾರ(ಮಾ.24 ರಂದು) ರಾತ್ರಿ ನಡೆದಿದೆ.
ಚವರ ಮೂಲದ ರಮೇಶನ್ – ಜೀಜಿ ದಂಪತಿಯ ಕ್ಷೇತ್ರ (5) ಮೃತ ಬಾಲಕಿ. ಅಪ್ಪ – ಅಮ್ಮನ ಜೊತೆ ಕೊಟ್ಟಂಕುಳಂಗರ ದೇವಸ್ಥಾನದ ಜಾತ್ರೆಗೆ ಕ್ಷೇತ್ರ ಬಂದಿದ್ದಳು. ರಥ ಎಳೆಯುವ ಸಂದರ್ಭದಲ್ಲಿ ಜನರ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಅಪ್ಪನ ಕೈಯಿಂದ ಆಕಸ್ಮಿಕವಾಗಿ ಕ್ಷೇತ್ರ ಕೆಳಗೆ ಬಿದ್ದಿದ್ದಾಳೆ. ರಥದ ಚಕ್ರ ಮಗುವಿನ ಮೇಲೆ ಹರಿದಿದೆ. ಪರಿಣಾಮ ಮಗುವಿನ ಪ್ರಾಣ ಹೋಗಿದೆ.
ಕ್ಷೇತ್ರಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಆದರೆ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.“ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವೊಮ್ಮೆ ಮಕ್ಕಳು ರಥಕ್ಕೆ ಕಟ್ಟಿದ ಹಗ್ಗವನ್ನು ಎಳೆಯುತ್ತಾರೆ. ಮಗು ಆಕಸ್ಮಿಕವಾಗಿ ಬಿದ್ದಿದ್ದಾಳೆಂದು ತೋರುತ್ತದೆ” ಎಂದು ಪೊಲೀಸರು ಹೇಳಿದ್ದಾರೆ.