ಕುಂದಾಪುರ, ಮಾರ್ಚ್ 25: ಕುಂದಾಪುರದ ಮುಖ್ಯ ರಸ್ತೆಯ ಹಳೇ ಗೀತಾಂಜಲಿ ಟಾಕೀಸಿನ ಜಾಗದಲ್ಲಿ ನಿರ್ಮಿಸಲಾಗಿದ್ದ ಫ್ಲ್ಯಾಟಿನ ಮಹಡಿಯಿಂದ ಅಚಾನಕ್ ಆಗಿ ಬಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ
ಮಹಿಳೆಯನ್ನು ಫ್ಲ್ಯಾಟಿನ ನಿವಾಸಿ ಲಕ್ಷ್ಮೀ ಪ್ರತಾಪ್ ನಾಯಕ್ ಎಂದು ಗುರುತಿಸಲಾಗಿದೆ.ಇವರು ಆದಿತ್ಯವಾರ ಸಂಜೆ 7.00 ಗಂಟೆಯ ಸುಮಾರಿಗೆ ಫ್ಲ್ಯಾಟಿನ ಮಹಡಿಯ ಮೇಲೆ ಒಣಗಿಸಲು ಹಾಕಿದ್ದ ತೆಂಗಿನ ಕಾಯಿಯನ್ನು ತರಲು ಹೋಗಿದ್ದು ಅಕಸ್ಮಾತ್ತಾಗಿ ಮಹಡಿಗೆ ಅಳವಡಿಸಲಾಗಿದ್ದ ಫೈಬರ್ ಶೀಟ್ ಮೇಲೆ ಕಾಲಿಟ್ಟಿದ್ದರಿಂದ ಅದು ತುಂಡಾಗಿ ನೇರ ಲಿಫ್ಟ್ ನ ಮೇಲೆ ಬಿದ್ದರು ಅವರ ತಲೆಗೆ ಹಾಗೂ ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ
ಸುದ್ದಿ ತಿಳಿದ ತಕ್ಷಣ ಆಗಮಿಸಿದ ಕುಂದಾಪುರ ಠಾಣಾ ಪೊಲೀಸರು ಲಿಫ್ಟ್ ಜಾಗದಲ್ಲಿ ಸಿಲುಕಿಕೊಂಡ ಮೃತದೇಹವನ್ನು ಹೊರ ತೆಗೆಯಲು ಹರಸಾಹಸ ಪಟ್ಟರು ಕೊನೆಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಲಿಫ್ಟ್ ಗೆ ಅಳವಡಿಸಲಾಗಿದ್ದ ಕಬ್ಬಿಣದ ಸಲಾಕೆಗಳನ್ನು ತುಂಡರಸಿ ಮೃತ ದೇಹವನ್ನು ಹೊರತೆಗೆಯಲಾಯಿತು
ಮೃತದೇಹವನ್ನು ನಗರದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಮೃತರು ನಗರದ ಆಡಿಟರ್ ಪ್ರತಾಪ್ ನಾಯಕ್ ರವರ ಪತ್ನಿಯಾಗಿದ್ದು ಇಬ್ಬರು ಪುತ್ರರನ್ನು ಅಗಲಿದ್ದಾರೆ.ಈ ಕುರಿತು ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ