ಕಾರ್ಕಳ :ಮಾರ್ಚ್ 23: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಏಳು ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಬಿಗು ಕ್ರಮ ಕೈಗೊಳ್ಳಲಾಗಿದೆ ಉಭಯ ಜಿಲ್ಲೆಗಳ ಕ್ಷೇತ್ರದ ಗಡಿಭಾಗದಲ್ಲಿ ಕಟೇಚ್ಚರವಹಿಸಲಾಗಿದೆ.
ಚೆಕ್ ಪೋಸ್ಟ್ ಗಳಲ್ಲಿ ಹಗಲು ರಾತ್ರಿ 3 ಪಾಳಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾರೆ. ಈ ಹಿಂದಿನ ಚುನಾವಣೆಗಳ ಸಂದರ್ಭ ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಯಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿತ್ತು
ಈ ಬಾರಿ ಒಳಭಾಗದ ರಸ್ತೆಗಳಲ್ಲೂ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಕಾರ್ಕಳ ವಿಧಾನಸಭಾ ವಿಧಾನಸಭಾ ಕ್ಷೇತ್ರದ ಏಳು ಗಡಿಭಾಗಗಳಾದ ಕಾರ್ಕಳ ತಾಲೂಕಿನ ಈದು, ಮಾಳ, ರಂಜಾಳ ಮಂಜಟ್ಟು ಸಾಣೂರು ಮುಣ್ಕೂರು ಜಾರಿಗೆ ಕಟ್ಟೆ ಹಾಗೂ ಹೆಬ್ರಿ ತಾಲೂಕಿನ ಸೋಮೇಶ್ವರದಲ್ಲಿ ಚೆಕ್ ಪೋಸ್ಟ್ ಗಳಿವೆ.
ಸಾಣೂರು ಚೆಕ್ ಪೋಸ್ಟ್ ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿ ಪ್ರತಿಯೊಂದು ವಾಹನವನ್ನು ಅತಿ ಸೂಕ್ಷ್ಮತೆಯಿಂದ ಪರಿಶೀಲಿಸಿ ಮುಂದಕ್ಕೆ ಬಿಡಲಾಗುತ್ತಿತ್ತು.
ಈ ಕಾರ್ಯಚರಣೆಯಲ್ಲಿನಗರ ಪೊಲೀಸ್ ಠಾಣೆಯ ನಗರ ಠಾಣಾಧಿಕಾರಿ ಹಾಗೂ ಪೋಲಿಸ್ ಸಿಬ್ಬಂದಿಗಳು ಭಾಗವಹಿಸಿದ್ದರು.