ಮಣಿಪಾಲ :ಮಾರ್ಚ್ 23 : ಅಶಕ್ತರಿಗೆ ಸಾಮಾಜಿಕ ಒಳಗೊಳ್ಳುವಿಕೆ [ಸಾಕಲ್ಯ] ಮತ್ತು ಸುಲಭ ಲಭ್ಯತೆಯ ವಾತಾವರಣವನ್ನು ಸೃಷ್ಟಿಸುವ ಪ್ರಾಮುಖ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮೇಲಕ ಮಣಿಪಾಲ್ ಮೆಡಿಕಲ್ ಕಾಲೇಜಿನಲ್ಲಿ ಜಾಗತಿಕ ಅಶಕ್ತರ ದಿನವನ್ನು ಮಾರ್ಚ್ 19, 2024 ರಂದು ಆಚರಿಸಲಾಗಿದ್ದು ಈ ಕಾರ್ಯಕ್ರಮವನ್ನು ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ನಾವೀನ್ಯ ವಿಭಾಗ ಮತ್ತು ಆರೋಗ್ಯ ನೀತಿಯ ವಿಭಾಗ [ಡಿಪಾರ್ಟ್‌ಮೆಂಟ್ ಆಫ್ ಹೆಲ್ತ್ ಪಾಲಿಸಿ] ಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು .
ಉಡುಪಿಯ ಜಿಲ್ಲಾ ಅಶಕ್ತರ ಕ್ಷೇಮಾಭಿವೃದ್ದಿ ಅಧಿಕಾರಿ ರತ್ನಾ ಸುವರ್ಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಅವರು ಅಶಕ್ತರ ಸಬಲೀಕರಣ ಮತ್ತು ಪ್ರಗತಿಯ ಬಗ್ಗೆ ಮಾತನಾಡಿದರು. ಸರ್ಕಾರ ಅಶಕ್ತರ ಜೀವನಮಟ್ಟದ ಸುಧಾರಣೆಗಾಗಿ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಮಾತನಾಡಿದರು. ಅಶಕ್ತರಿಗೆ ಸಂಬಂಧಿಸಿದ 2016ರ ಕಾಯ್ದೆಯ ಕುರಿತು ಮಾತನಾಡಿದ ಅವರು, ಅಶಕ್ತರಿಗೆ ಬೆಂಬಲವಾಗಿ ವಿದ್ಯಾರ್ಥಿ ಸಮುದಾಯವೂ ಸ್ಪಂದಿಸಬೇಕಾದ ಅಗತ್ಯದ ಕುರಿತು ಹೇಳಿದರು. ಸರ್ಕಾರದ ಸಹಭಾಗಿತ್ವದೊಂದಿಗೆ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಸಮಾಜಸೇವಾ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಬೋಧಕ ಮತ್ತು ವಿದ್ಯಾರ್ಥಿಗಳು ನಡೆಸುತ್ತಿರುವ ಮಹತ್ತ್ವದ ಕೆಲಸಗಳನ್ನು ಶ್ಲಾಘಿಸಿದರು.
ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಪ್ರಭಾರ ನಿರ್ದೇಶಕ ಡಾ. ಆಶಾ ಕಾಮತ್ ವಿಶ್ವ ಅಶಕ್ತರ ದಿನದ ಆಶಯವು ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಮುಖ್ಯ ಪೋಷಕರಾದ ಡಿ. ಎ. ಪ್ರಸನ್ನರ ದೃಷ್ಟಿಕೋನದೊಂದಿಗೆ ಹೊಂದಿಕೊಳ್ಳುವುದನ್ನು ಒತ್ತಿ ಹೇಳಿದರು. ಸಾಕಲ್ಯ ಮತ್ತು ಸಮತೆಯ ತತ್ತ್ವಗಳು ಸಮಾಜದಲ್ಲಿ ಕೇವಲ ಆದರ್ಶಗಳಾಗದೆ ಸಮಾಜದಲ್ಲಿ ವಾಸ್ತವ ನೆಲೆಯಲ್ಲಿ ಸಾಕಾರಗೊಳಿಸಬೇಕು. ಈ ನಿಟ್ಟಿನಲ್ಲಿ ಇಂದಿನ ವಿಶ್ವ ಮಹಿಳಾ ದಿನವು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ರೂಪಿಸುವ ಮಹತ್ತ್ವದ ಪ್ರಯತ್ನವಾಗಿದೆ’ ಎಂದರು.
ಈ ಕಾರ್ಯಕ್ರಮವು ಅಶಕ್ತರ ದಿನವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಯೋಜಕರು ಮತ್ತು ಅಧ್ಯಾಪಕರಿಂದ ಸಕ್ರಿಯ ಭಾಗವಹಿಸುವಿಕೆಯನ್ನು ಕಂಡಿತು. ಕಾರ್ಯಕ್ರಮದಲ್ಲಿ ಎಂಪಿಎಚ್ ನ ಸಹಪ್ರಾಧ್ಯಾಪಕರಾದ ಡಾ. ವರಲಕ್ಷ್ಮೀ ಚಂದ್ರಶೇಖರನ್ ಡಾ.ವರಲಕ್ಷ್ಮಿ ಚಂದ್ರಶೇಖರನ್ ಅವರು ಆಚರಣೆಯ ಮಹತ್ವವನ್ನು ಪರಿಚಯಿಸಿದರು, ಡಾ.ರಾಹುಲ್ ಶೇಷನ್ ಕ್ಲೇರ್ ಅವರು ಸ್ಪರ್ಧೆಗಳನ್ನು ನಡೆಸಿಕೊಟ್ಟರು , ಇದು ಹೆಚ್ಚು ಸುಲಭವಾಗಿ ಮತ್ತು ಸಮಾನವಾದ ಜಗತ್ತಿಗೆ ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸಿತ್ತು . ಎಂಪಿಎಚ್ ಕಾರ್ಯಕ್ರಮಕ್ಕೆ ಡಾ ಆರತಿ ರಾವ್, ಎಂಎಚ್‌ಎ ಕಾರ್ಯಕ್ರಮಕ್ಕೆ ಡಾ ರಾಜೇಶ್ ಕಾಮತ್, ಎಂಎಸ್‌ಡಬ್ಲ್ಯೂ ಕಾರ್ಯಕ್ರಮಕ್ಕೆ ಡಾ ಟೆಡ್ಡಿ ಆಂಡ್ರ್ಯೂಸ್ ಸೇರಿದಂತೆ ಸಂಯೋಜಕರು, ಆರೋಗ್ಯ ನೀತಿ ವಿಭಾಗದ ಅಧ್ಯಾಪಕರು ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಡಾ ವಾಣಿ ಲಕ್ಷ್ಮಿ ಆರ್ ವಂದಿಸಿದರು. ಅವರ ಪ್ರಯತ್ನಗಳು ಸಾರ್ವಜನಿಕ ಆರೋಗ್ಯ, ಸಾಮಾಜಿಕ ಕಲ್ಯಾಣ ಮತ್ತು ಮತ್ತು ವಿಕಲಾಂಗ ಜನರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವಲ್ಲಿ ನಾವೀನ್ಯತೆ ಕುರಿತು ಎತ್ತಿ ತೋರಿಸಿದವು.
ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ ಎಚ್ ಎಸ್ ಬಲ್ಲಾಳ್, ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ ಡಿ ವೆಂಕಟೇಶ್, ಸಹ ಕುಲಪತಿ ಡಾ ಶರತ್ ರಾವ್, ಮತ್ತು ಕುಲಸಚಿವ ಡಾ ಗಿರಿಧರ್ ಕಿಣಿ ಸೇರಿದಂತೆ ಮಾಹೆಯ ಹಿರಿಯ ಅಧಿಕಾರಿಗಳ ಅಚಲ ಬೆಂಬಲಕ್ಕಾಗಿ ವಿಶೇಷ ಮನ್ನಣೆಗಳನ್ನು ನೀಡಲಾಯಿತು. ಅವರ ಬೆಂಬಲವು ಒಳಗೊಳ್ಳುವಿಕೆ ಮತ್ತು ಪ್ರವೇಶದ ವಾತಾವರಣವನ್ನು ಬೆಳೆಸುವಲ್ಲಿ ಸಂಸ್ಥೆಯ ಬದ್ಧತೆಯನ್ನು ಒತ್ತಿಹೇಳುತ್ತದೆ.