ಮಂಗಳೂರು:ಮಾರ್ಚ್ 23: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ತಡರಾತ್ರಿ ನಂತೂರಿನಲ್ಲಿ ನಡೆದಿದ್ದು, ಈ ಅಪಘಾತದಲ್ಲಿ ಕಾರಿನ ಚಾಲಕ ಸಾವನಪ್ಪಿದ್ದಾರೆ. ಮೃತರನ್ನು ತೊಕ್ಕೊಟ್ಟಿನ ಹಿರಿಯ ಬಿಜೆಪಿ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ ಶಮಿತ್ ಶೆಟ್ಟಿ(29) ಯಾನೆ ಬಂಟಿ ಎಂದು ಗುರುತಿಸಲಾಗಿದೆ.
ಶಮಿತ್ ನಿನ್ನೆ ರಾತ್ರಿ ಮಂಗಳೂರಿನ ಸ್ನೇಹಿತನ ಮನೆಯಲ್ಲಿ ನಡೆದಿದ್ದ ದೈವದ ಕೋಲದಲ್ಲಿ ಭಾಗವಹಿಸಿ ತೊಕ್ಕೊಟ್ಟಿನ ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ಡಿವೈಡರ್ ಮೇಲೆ ಹಾಕಿದ್ದ ಕಬ್ಬಿಣದ ತಡೆಬೇಲಿ ಮುರಿದು ಹೋಗಿದೆ.
ಕಾರಿನ ಮುಂಭಾಗ ಯಾವುದೆಂದು ತಿಳಿಯಲಾಗದಷ್ಟು ನಜ್ಜುಗುಜ್ಜಾಗಿದ್ದು ತಡೆಬೇಲಿಯ ಮೇಲೆ ಸಿಕ್ಕಿಕೊಂಡಿತ್ತು. ಬೆಳಗ್ಗೆ ಜೆಸಿಬಿ ಮೂಲಕ ಕಾರನ್ನು ತೆರವುಗೊಳಿಸಲಾಗಿತ್ತು. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ