ಉಡುಪಿ, ಮಾರ್ಚ್ 22: ಡಾ ಟಿಎಂಎ ಪೈ ಆಸ್ಪತ್ರೆ, ಉಡುಪಿ ಸಮಗ್ರ ಪಾರ್ಶ್ವವಾಯು ಪುನಶ್ಚೇತನ ಮತ್ತು ಚೇತರಿಕೆ ಕೇಂದ್ರ (ಸಿಸಿಎಸ್ಆರ್ಆರ್), ಮಾಹೆ, ಮಣಿಪಾಲದ ಸಹಯೋಗದೊಂದಿಗೆ ಉಚಿತ ಪಾರ್ಶ್ವವಾಯು ಪುನಶ್ಚೇತನ ಶಿಬಿರವನ್ನು ಮಾರ್ಚ್ 23, 2024 ರಂದು ಶನಿವಾರ ಬೆಳಿಗ್ಗೆ 9:00 ರಿಂದ 12:30 ವರೆಗೆ ಆಯೋಜಿಸಲಾಗಿದೆ.
ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ, ಮತ್ತು ವಾಕ್ ಮತ್ತು ಶ್ರವಣ ವಿಭಾಗಗಳು ಈ ಶಿಬಿರದಲ್ಲಿ ಪಾರ್ಶ್ವವಾಯುವಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಪ್ರಶ್ನೋತ್ತರ, ಸ್ಟ್ರೋಕ್‌ಗೆ ಸಂಬಂಧಿಸಿದ ಸಮಸ್ಯೆಗಳ ತಪಾಸಣೆ ಮತ್ತು ಪುನಶ್ಚೇತನದ ಕುರಿತು ಮೌಲ್ಯಯುತವಾದ ವೈಯಕ್ತಿಕ ಸಲಹೆಯನ್ನು ನೀಡುವ ಮೂಲಕ ತಮ್ಮ ಸೇವೆಗಳನ್ನು ನೀಡಲಿದ್ದಾರೆ.
ಫಿಸಿಯೋಥೆರಪಿ, ವಾಕ್ ಮತ್ತು ಶ್ರವಣ, ಹಾಗೂ ಆಕ್ಯುಪೇಷನಲ್ ಥೆರಪಿ ವಿಭಾಗದ ಸೇವೆಗಳು ನಿಯಮಿತವಾಗಿ ಎಲ್ಲಾ ಕೆಲಸದ ದಿನಗಳಲ್ಲಿ ಡಾ ಟಿಎಂಎ ಪೈ ಆಸ್ಪತ್ರೆ, ಉಡುಪಿಯಲ್ಲಿ ಲಭ್ಯವಿವೆ.
ಉಡುಪಿಯ ಡಾ ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಶಶಿಕಿರಣ್ ಉಮಾಕಾಂತ್ ಅವರು ಈ ಪುನಶ್ಚೇತನ ಶಿಬಿರ ಹಾಗೂ ಕಾರ್ಯಕ್ರಮದ ಮಹತ್ವವನ್ನು ಒತ್ತಿ ಹೇಳಿ, ಪಾರ್ಶ್ವವಾಯು ಪೀಡಿತರು ಮತ್ತು ಆರೈಕೆ ಮಾಡುವವರು ಶಿಬಿರದಲ್ಲಿ ಲಭ್ಯವಿರುವ ಈ ಉಚಿತ ಸೇವೆಗಳನ್ನು ಬಳಸಿಕೊಳ್ಳುವಂತೆ ವಿನಂತಿಸಿದ್ದಾರೆ.
ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನ ಡೀನ್ ಡಾ. ಅರುಣ್ ಮಯ್ಯ, ಮತ್ತು ಸಿಸಿಎಸ್ಆರ್ಆರ್ ನ ಸಂಯೋಜಕರಾದ ಡಾ ಜಾನ್ ಸೊಲೊಮನ್ ಅವರು ಪಾರ್ಶ್ವವಾಯು ಚೇತರಿಕೆಗೆ ಈ ಪ್ರದೇಶದಲ್ಲಿಯೇ ಲಭ್ಯವಿರುವ ಅತ್ಯುತ್ತಮವಾದ ಆರೋಗ್ಯ ಸೇವೆಗಳನ್ನು ಬಳಸಿಕೊಳ್ಳುವಂತೆ ಜನರನ್ನು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ, ದಯವಿಟ್ಟು 0820-2942164 ಅನ್ನು ಸಂಪರ್ಕಿಸಿ.