ಬೆಂಗಳೂರು : ಮಾರ್ಚ್ 21: ಲೋಕಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಚುನಾವಣಾ ಆಯೋಗವು ಅಕ್ರಮ ತಡೆಗೆ ಮಹತ್ವದ ಕ್ರಮ ಕೈಗೊಂಡಿದೆ.
ಚುನಾವಣೆ ನೀತಿ ಸಂಹಿತೆ ಭಾಗವಾಗಿ ಡಿಜಿಟಲ್ ವಹಿವಾಟಿನ ಮೇಲೂ ನಿಗಾ ಇಡಲಾಗುವುದು. ಉದಾಹರಣೆಗೆ ಯಾವುದೇ ವ್ಯಕ್ತಿ 20 ಜನರ ಖಾತೆಗೆ ತಲಾ ಎರಡು ಸಾವಿರ ಹಣ ವರ್ಗಾವಣೆ ಮಾಡಿದ್ದರೆ ಅದನ್ನು ಸಂಶಯಾಸ್ಪದ ವಹಿವಾಟು ಎಂದು ಪರಿಗಣಿಸಿ ಅದರ ಮೇಲೆ ನಿಗಾ ವಹಿಸಲಾಗುವುದು. ಜೊತೆಗೆ ಬ್ಯಾಂಕುಗಳಿಂದ ಪ್ರತಿದಿನ ವಹಿವಾಟುಗಳ ವಿವರ ಪಡೆದು ಅದರಲ್ಲಿ ಸಂಶಯಾಸ್ಪದ… pic.twitter.com/GmY9r1eOLd
— DIPR Karnataka (@KarnatakaVarthe) March 20, 2024
ಚುನಾವಣೆ ನೀತಿ ಸಂಹಿತೆ ಭಾಗವಾಗಿ ಡಿಜಿಟಲ್ ವಹಿವಾಟಿನ ಮೇಲೂ ನಿಗಾ ಇಡಲಾಗುವುದು. ಉದಾಹರಣೆಗೆ ಯಾವುದೇ ವ್ಯಕ್ತಿ 20 ಜನರ ಖಾತೆಗೆ ತಲಾ ಎರಡು ಸಾವಿರ ಹಣ ವರ್ಗಾವಣೆ ಮಾಡಿದ್ದರೆ ಅದನ್ನು ಸಂಶಯಾಸ್ಪದ ವಹಿವಾಟು ಎಂದು ಪರಿಗಣಿಸಿ ಅದರ ಮೇಲೆ ನಿಗಾ ವಹಿಸಲಾಗುವುದು.
ಜೊತೆಗೆ ಬ್ಯಾಂಕುಗಳಿಂದ ಪ್ರತಿದಿನ ವಹಿವಾಟುಗಳ ವಿವರ ಪಡೆದು ಅದರಲ್ಲಿ ಸಂಶಯಾಸ್ಪದ ವಹಿವಾಟುಗಳು ಕಂಡುಬಂದರೆ ಅಂತಹವರ ಮೇಲೆ ಕಣ್ಣಿಡಲಾಗುವುದು.