ಉಡುಪಿ:ಮಾರ್ಚ್ 19: ನಂ.1 ಬೀಡಿ ಮಾರ್ಕಿನ ಮಾಲೀಕ ತಾಂಗದಗಡಿ ನಿವಾಸಿ ಟಿ.ಕೃಷ್ಣಪ್ಪ ಅವರು ಇಂದು ನಸುಕಿನ ವೇಳೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 78 ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಟಿ.ಕೃಷ್ಣಪ್ಪ ಅವರು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಅವರು 51 ವರ್ಷಗಳ ಹಿಂದೆ ನಂ.1 ಬೀಡಿಯನ್ನು ಕರಾವಳಿಗೆ ಪರಿಚಯಿಸಿದ್ದರು. ಅಂದಿನಿಂದ ಇಂದಿನಿಂದವರೆಗೂ ನಂ.1 ಬೀಡಿ ಕರಾವಳಿಯಾದ್ಯಂತ ಪ್ರಖ್ಯಾತಿ ಪಡೆದಿದೆ. ಮೃತರು ಪತ್ನಿ, ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.