ದೆಹಲಿ ಮಾರ್ಚ್ 16:ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಬಿಜೆಪಿ ಸೇರಿದ್ದಾರೆ. ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕಿಯೂ ಆಗಿರುವ ಅನುರಾಧಾ ಪೌಡ್ವಾಲ್,ಭಕ್ತಿಗೀತೆ, ಭಜನಾ ಗಾಯನ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಸೇರಿರುವ ಅನುರಾಧಾ ಅವರು ಸ್ಟಾರ್ ಪ್ರಚಾರಕರಾಗುವ ಸಾಧ್ಯತೆ ಇದೆ.
ದೆಹಲಿ ಮಾರ್ಚ್ 16: ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ (Anuradha Paudwal) ಇಂದು (ಶನಿವಾರ) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಲೋಕಸಭೆ ಚುನಾವಣೆ ಎಲೆಕ್ಷನ್
ದಿನಾಂಕ ಘೋಷಣೆಯಾಗುವ ಮುನ್ನವೇ ಅನುರಾಧಾ ಪೌಡ್ವಾಲ್ ಬಿಜೆಪಿ ಸೇರಿರುವುದರಿಂದ ಪಕ್ಷವು ಚುನಾವಣೆಯ ದೊಡ್ಡ ಜವಾಬ್ದಾರಿಯನ್ನು ನೀಡಬಹುದು ಎಂದು ತಜ್ಞರು ಹೇಳುತ್ತಾರೆ. ಬಿಜೆಪಿ ಪಕ್ಷದ ಸ್ಟಾರ್ ಚುನಾವಣಾ ಪ್ರಚಾರಕ್ಕೂ ಅನುರಾಧಾ ಬರಬಹುದು ಎಂದು ನಿರೀಕ್ಷಿಸಲಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ಮುಖ್ಯ ವಕ್ತಾರ ಅನಿಲ್ ಬಲುನಿ ಸೇರಿದಂತೆ ಅದರ ಹಿರಿಯ ನಾಯಕರ ಸಮ್ಮುಖದಲ್ಲಿ ಗಾಯಕಿ ಬಿಜೆಪಿ ಸೇರಿದ್ದಾರೆ.
ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕಿಯೂ ಆಗಿರುವ ಅನುರಾಧಾ ಪೌಡ್ವಾಲ್ ,ಭಕ್ತಿಗೀತೆ, ಭಜನಾ ಗಾಯನ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅಕ್ಟೋಬರ್ 27, 1954 ರಂದು ಮುಂಬೈನಲ್ಲಿ ಜನಿಸಿದ ಅನುರಾಧಾ, 1973 ರಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಯಪ್ರದಾ ಅಭಿನಯದ ‘ಅಭಿಮಾನ್’ ಚಿತ್ರದ ಮೂಲಕ ತಮ್ಮ ಗಾಯನ ವೃತ್ತಿಜೀವನವನ್ನು ಪ್ರಾರಂಭಿಸಿದರು. ‘ಆಶಿಕಿ’, ‘ದಿಲ್ ಹೈ ಕೀ ಮಾನ್ತಾ ನಹಿ’ ಮತ್ತು ‘ಬೇಟಾ’ ಚಿತ್ರಗಳಲ್ಲಿನ ಗಾಯನಕ್ಕಾಗಿ ಅನುರಾಧಾ ಪೌಡ್ವಾಲ್ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ದಕ್ಕಿತ್ತು. 80-90ರ ದಶಕದಲ್ಲಿ ಅನುರಾಧಾ ಪೌಡ್ವಾಲ್ ಹಾಡಿದ ಬಹುತೇಕ ಹಾಡುಗಳು ಹಿಟ್ ಆಗಿದ್ದವು.
ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿದ್ದಾರೆ ಅನುರಾಧಾ ಪೌಡ್ವಾಲ್.