ಧರ್ಮಸ್ಥಳ :ಮಾರ್ಚ್ 08:ಮಂಜುನಾಥ ಸ್ವಾಮಿಯ ಸೇವೆ ಸಲ್ಲಿಸುತ್ತಿದ್ದ ಆನೆ ಲತಾ ಹೃದಯಾಘಾತದಿಂದ ಶಿವೈಕ್ಯವಾಗಿದೆ. ಮಹಾಶಿವಾರಾತ್ರಿ ದಿನವೇ ಆನೆ ಮೃತಪಟ್ಟಿರುವುದು ಭಕ್ತರನ್ನು ಮತ್ತಷ್ಟು ಶೋಕಸಾಗರದಲ್ಲಿ ಮುಳುಗಿಸಿದೆ.
ಧರ್ಮಸ್ಥಳ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಾ ಭಕ್ತರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯ ಪ್ರೀತಿಗೆ ಪಾತ್ರವಾಗಿದ್ದ ಆನೆ ಲತಾ ಹೃದಯಾಘಾತದಿಂದ ಮೃತಪಟ್ಟಿದೆ.
ಮಹಾ ಶಿವರಾತ್ರಿ ದಿನವೇ ಆನೆ ಲತಾಗೆ ಹೃದಯಾಘಾತವಾಗಿ ಮೃತಪಟ್ಟಿದೆ. 60 ವಯಸ್ಸಿನ ಲತಾ ಅಂತ್ಯಸಂಸ್ಕಾರವನ್ನು ಇಂದು ಸಂಜೆ ಧರ್ಮಸ್ಥಳದಲ್ಲಿ ನೆರವೇರಿಸಲಾಗಿದೆ.
ಕಳೆದ 50 ವರ್ಷದಲ್ಲಿ ಆನೆ ಲತಾ ಒಂದೇ ಒಂದು ಬಾರಿ ಸಿಟ್ಟಿಗೆದ್ದಿಲ್ಲ, ಯಾರನ್ನೂ ನೋಯಿಸಿಲ್ಲ.ದೇವಸ್ಥಾನದ ಕಾರ್ಯಗಳ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಆಶೀರ್ವಾದ ನೀಡುತ್ತಿದ್ದ ಲತಾ ಭಕ್ತರಿಗೂ ಅಚ್ಚು ಮೆಚ್ಚು ಶಿವರಾತ್ರಿ ದಿನವೇ ಲತಾ ನಿಧನ ಹೆಗ್ಗಡೆ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ. ಸದ್ಯ ಧರ್ಮಸ್ಥಳಲ್ಲಿ ಲಕ್ಷ್ಮಿ ಹಾಗೂ ಶಿವಾನಿ ಎರಡು ಆನೆಗಳಿವೆ.