ಚಿಕ್ಕಮಗಳೂರು:ಮಾರ್ಚ್ 08: ಕೆಎಸ್‌ಆರ್ಟಿಸಿ ಬಸ್ಸಿನ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯ wಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 45 ಪ್ರಯಾಣಿಕರು ಬದುಕು ಉಳಿದಿದ್ದಾರೆ. ಈ ಘಟನೆಯು ಚಿಕ್ಕಮಂಗಳೂರು ದಕ್ಷಿಣ ಕನ್ನಡ ಸಂಪರ್ಕಿಸುವ ಚಾರ್ಮಾಡಿ ಘಾಟ್ ತಿರುವಿನಲ್ಲಿ ನಡೆದಿದೆ.
ಕೆಎಸ್‌ಆರ್ಟಿಸಿ ಬಸ್ ಕಡೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ಚಾರ್ಮಾಡಿ ಘಾಟ್ ತಿರುವಿನಲ್ಲಿ ಚಾಲಕನಿಗೆ ಬ್ರೇಕ್ ಕಂಟ್ರೋಲ್ ತಪ್ಪಿದೆ. ಈ ವೇಳೆ ಚಾಲಕ ಸಮಯ ಪ್ರಜ್ಞೆಯಿಂದ ಡಿವೈಡರ್ಗೆ ಬಸ್ ಡಿಕ್ಕಿ ಆಗಿದೆ.ಈ ವೇಳೆ ಚಾಲಕ ಡಿವೈಡರ್ಗೆ ಬಸ್ಸನ್ನು ಡಿಕ್ಕಿ ಹೊಡೆಸಿ ಬಸ್ಸನ್ನು ನಿಲ್ಲಿಸಿದ್ದಾನೆ.
ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್ನಿಂದ ಭಾರಿ ಪ್ರಮಾಣದ ಹೊಗೆ ಹೊರಗೆ ಬಂದಿದೆ. ಈ ವೇಳೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 45ಕ್ಕೂ ಹೆಚ್ಚು ಜನರು ಅದೃಷ್ಟವಶಾತ್ ಪ್ರಾಣ ಅಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ಬಣಕಲ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಾಗಿದೆ.