ಕೇರಳ :ಮಾರ್ಚ್ 07:ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿವೆ. ಎಐ ಆಧಾರಿತ ರೋಬೊಗಳು (Robots) ಹೋಟೆಲ್‌ಗಳಲ್ಲಿ ಸರ್ವ್ ಮಾಡುತ್ತಿವೆ. ಎಐ ಆ್ಯಂಕರ್‌ಗಳು ಚಾನೆಲ್‌ಗಳಲ್ಲಿ ಸುದ್ದಿ ಓದುತ್ತಿದ್ದಾರೆ.
ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯಂತಹ ಚಾಟ್‌ಬಾಟ್‌ಗಳು ಕೋಡ್ ರಚನೆ, ಕವನ, ಪ್ರಬಂಧ ರಚನೆಯಲ್ಲೂ ಸೈ ಎನಿಸಿಕೊಂಡಿವೆ. ಇದರ ಬೆನ್ನಲ್ಲೇ, ಕೇರಳದ ಶಾಲೆಯೊಂದು ಕೃತಕ ಬುದ್ಧಿಮತ್ತೆ ಆಧಾರಿತ ರೋಬೊ ಟೀಚರ್‌ಅನ್ನು ಪರಿಚಯಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಸೀರೆಉಟ್ಟು, ಕುಂಕುಮ ಹಚ್ಚಿಕೊಂಡು ಸ್ಕೇಟಿಂಗ್ ವೀಲ್ ಮೂಲಕ ಐರಿಸ್ ಕ್ಲಾಸ್‌ನಲ್ಲಿ ಓಡಾಡುತ್ತಾಳೆ.
ಹೌದು, ಮೇಕರ್‌ಲ್ಯಾಬ್ಸ್ ಎಜುಟೆಕ್ ಎಂಬ ಸಂಸ್ಥೆಯ ಸಹಯೋಗದಲ್ಲಿ ದೇಶದ ಮೊದಲ ಎಐ ಆಧಾರಿತ ರೋಬೊ ಟೀಚರ್‌ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕೆ ಐರಿಸ್ (Iris) ಎಂದು ಹೆಸರಿಡಲಾಗಿದೆ. ಕಡುವಾಯಿಲ್ ಥಂಗಲ್ ಚಾರಿಟೇಬಲ್ ಟ್ರಸ್ಟ್ ಮುತುವರ್ಜಿ ವಹಿಸಿ, ತಿರುವನಂತಪುರಂನಲ್ಲಿರುವ ಕೆಟಿಸಿಟಿ ಸೆಕೆಂಡರಿ ಸ್ಕೂಲ್‌ನಲ್ಲಿ ಎಐ ಆಧಾರಿತ ರೋಬೊ ಟೀಚರ್‌ಅನ್ನು ಅಳವಡಿಸಿಕೊಳ್ಳಲಾಗಿದೆ.
ಶಾಲೆಗಳಲ್ಲಿ ಇತರ ಚಟುವಟಿಕೆಗಳಿಗೂ ಉತ್ತೇಜನ ನೀಡುವ ದಿಸೆಯಲ್ಲಿ 2021ರಲ್ಲಿ ನೀತಿ ಆಯೋಗ ಜಾರಿಗೆ ತಂದ ಅಟಲ್ ಟಿಂಕರಿಂಗ್ ಲ್ಯಾಬ್ (ATL) ಯೋಜನೆಯ ನೆರವು ಕೂಡ ಇದರ ಭಾಗವಾಗಿದೆ.