ಮಣಿಪಾಲ: ಮಾರ್ಚ್ 05:ಇತ್ತೀಚಿಗೆ ಆನ್ಲೈನ್ ವಂಚನೆ ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದೆ. ಯಾವುದೇ ಆ್ಯಪ್ ಡೌನ್ಲೋಡ್ ಮಾಡುವ ಮೊದಲು ಅದೆಷ್ಟು ಸುರಕ್ಷಿತ ಅನ್ನೋದನ್ನ ಪರೀಕ್ಷಿಸಿ ತಿಳಿದು ಕೊಂಡರೆ ಉತ್ತಮ, ಜೊತೆಗೆ ಮೋಸ ಹೋಗೋದನ್ನ ತಪ್ಪಿಸಬಹುದು
ವ್ಯಕ್ತಿಯೊಬ್ಬರು ಅನಾಮಧೇಯ ಆ್ಯಪ್ ಡೌನ್‌ಲೋಡ್ ಮಾಡಿ ಲಕ್ಷಾಂತರ ರೂ.ಕಳೆದುಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ
ಮಣಿಪಾಲದ ಉಮಾಕಾಂತ್ ಸಿಂಗ್ ಅವರಿಗೆ ಮಾ.4ರಂದು ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ಒಂದು ಸಂದೇಶ ಬಂದಿತ್ತು. ಅದರಂತೆ ಅವರು ಆ ಸಂಖ್ಯೆಗೆ ಕರೆಮಾಡಿದಾಗ ಆರೋಪಿಯು ಅದಕ್ಕೆ ಸಂಬಂಧಿಸಿ ಒಂದು ಅರ್ಜಿಯನ್ನು ಭರ್ತಿ ಮಾಡಲು ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದಾನೆ.
ಅದರಂತೆ ಡೌನ್‌ಲೋಡ್ ಮಾಡಿ ಅದನ್ನು ತುಂಬಿಸುವ ವೇಳೆಯೇ ಅವರ ಅಕೌಂಟ್‌ನಿಂದ 1,69,950 ರೂ.ಗಳು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.