ಕಾರ್ಕಳ :ಮಾರ್ಚ್ 03:ಕಾರ್ಕಳ ಕಸಬಾ ಗ್ರಾಮದ ಕರಿಯಕಲ್ಲು ಜಂಕ್ಷನ್ ಬಳಿ ನಿರ್ಮಲ ರಾವ್ ಮಾಲೀಕತ್ವದ ಹೋಟೆಲ್ ಕಟ್ಟಡಕ್ಕೆ ಬೆಳಗಿನ ಜಾವ 4 ಗಂಟೆಗೆ ಆಕಸ್ಮಿಕ ಬೆಂಕಿ ತಗುಲಿ ಹೋಟೆಲ್ ನಲ್ಲಿರುವ ಫ್ರಿಡ್ಜ್, ಗ್ರೈಂಡರ್, ಮಿಕ್ಸಿ, ಅಡುಗೆ ಪಾತ್ರೆ, ಜಿನಸು ಸಾಮಾಗ್ರಿ,ವಿದ್ಯುತ್ ಸಂಪರ್ಕ, ಬೆಂಕಿ ಪಾಲಾಗಿರುತ್ತದೆ. ಕಟ್ಟಡದ ಮೇಲ್ಛಾವಣಿ ಭಾಗಶಃ ಸುಟ್ಟು ಹೋಗಿದ್ದು ಸ್ಥಳೀಯರ ಹಾಗೂ ಅಗ್ನಿಶಾಮಕ ದಳದವರ ಸಹಕಾರದಿಂದ ಬೆಂಕಿಯನ್ನು ಹತೊಟಿಗೆ ತರಲಾಯಿತು. ಸುಮಾರು 1,20,000 ನಷ್ಟವಾಗಿರುತ್ತದೆ.