ಕಾರ್ಕಳ :ಮಾರ್ಚ್ 02: ಶ್ರೀ ಮಹಾಲಿಂಗೇಶ್ವರ ಯುವಕ ಹಾಗೂ ಮಹಿಳಾ ಮಂಡಲ (ರಿ.)ಇದರ 44ನೇ ವಾಷಿ೯ಕೋತ್ಸವ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪತ್ತೊಂಜಿಕಟ್ಟೆ ದಿನಾಂಕ 24.2.2024 ಶನಿವಾರ ಸಂಜೆ 6 ಗಂಟೆಗೆ ದೇವಾಲಯದ ವಠಾರದಲ್ಲಿ ಜರುಗಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ಧ್ವಜಾರೋಹಣವೇರಿಸಿ, ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ಸ್ವಾಮಿಗೆ ಮಹಾಪೂಜೆ ಸಲ್ಲಿಸಿ, ಸಂಜೆ ಸಭಾ ಕಾಯ೯ಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷ ಶ್ರೀ ದಿನೇಶ್ ಕೊರಳಕೋಡಿ ಸಭಾ ಅಧ್ಯಕ್ಷತೆ ವಹಿಸಿದ್ದರು,ಪೆವಾ೯ಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅಚ೯ಕರಾದ ಶ್ರೀ ಹರಿಕೃಷ್ಣ ಭಟ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕಾಕ೯ಳದ ಚಾಟ೯ಡ್ ಎಕೌಂಟೆಂಟ್ ಶ್ರೀ ಕಮಲಾಕ್ಷ ಕಾಮತ್ ,ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ನೆಲ್ಲಿಕಾರು, ಪ್ರಥಮ ದರ್ಜೆ ಪಿ.ಡಬ್ಲ್ಯೂ.ಡಿ. ಗುತ್ತಿಗೆದಾರಾದ ಶ್ರೀ ಅಂಬಿಕಾ ಪ್ರಸಾದ್ ಶೆಟ್ಟಿ, ಶ್ರೀ ಅರುಣ್ ಕುಮಾರ್ ನಿಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಿಳಾ ಮಂಡಲ ಉಪಾಧ್ಯಕ್ಷೆ ಶ್ರೀಮತಿ ಹೇಮ ಸತೀಶ್ ಮತ್ತು ಶಾಲಾ ಮುಖ್ಯೊಪಾಧ್ಯಾಯಿನಿ ಶ್ರೀಮತಿ ಶಾಂತಿ ಡಿ’ಅಲ್ಮೇಡಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವಕ ಮಂಡಲದ ಕೋಶಾಧಿಕಾರಿ ಶ್ರೀ ಪ್ರಸನ್ನ ರಾವ್ ಸ್ವಾಗತಿಸಿದರು, ಶ್ರೀ ಸಂದೇಶ್ ಕೋಟ್ಯಾನ್ ವಾಷಿ೯ಕ ವರದಿ ಮಂಡಿಸಿದರು, ಶಾಲಾ ವರದಿಯನ್ನು ಶ್ರೀಮತಿ ಶಾಂತಿ ಡಿ’ಅಲ್ಮೇಡಾರವರು ಮಂಡಿಸಿದರು, ರಾಜ್ಯ ಮಟ್ಟದ ವೆಟ್ ಲಿಪ್ಟಿಂಗ್ ಸ್ಪದೆ೯ಯಲ್ಲಿ ದ್ವಿತೀಯ ಸ್ಥಾನ ಪಡೆದ ಶ್ರೀ ಹರೀಣ್ ಇವರನ್ನು ಸನ್ಮಾನಿಸಲಾಯಿತು.ಶ್ರೀಮತಿ ಶುಭಲಕ್ಷ್ಮಿ ಬಂಗೇರ ಸನ್ಮಾನ ಪತ್ರ ವಾಚಿಸಿದರು, ಯುವಕ ಮಂಡಲದ ಕ್ರೀಡಾ ಕಾಯ೯ದಶಿ೯ ಶ್ರೀ ಸುರೇಶ್ ಸುವರ್ಣ ಮತ್ತು ಮಹಿಳಾ ಮಂಡಲದ ಮಮತಾ ಸುವರ್ಣರವರು ಬಹುಮಾನಗಳ ಪಟ್ಟಿ ಒದಿದರು,ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯನ್ನು ತೋರಿದ ಪ್ರತಿಭೆಗಳನ್ನು ಪುರಸ್ಕಾರಿಸಲಾಯಿತು. ಗುಂಡ್ಯ ಹಾಗೂ ಪತ್ತೊಂಜಿಕಟ್ಟೆಯ 2 ಮಂದಿಗೆ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಧನಸಹಾಯ ಮಾಡಲಾಯಿತು. ಶ್ರೀ ಹೆನ್ರಿ ಸಾಂತ್ ಮಯೋರ್, ಶ್ರೀ ದಿನೇಶ್ ಕೊರಳಕೋಡಿ, ಶ್ರೀಮತಿ ಜ್ಯೋತಿ ಗಣೇಶ್ ಶೆಟ್ಟಿ, ಶ್ರೀಮತಿ ಹೇಮ ಸತೀಶ್ ರವರನ್ನು ಅಭಿನಂದಿಸಲಾಯಿತು, ಮಹಿಳಾ ಮಂಡಲದ ಕಾಯ೯ದಶಿ೯ ಶ್ರೀಮತಿ ಅರುಂಧತಿ ಬಿ. ಆಚಾರ್ ರು ಧನ್ಯವಾದವಿತ್ತರು. ಶ್ರೀ ನವೀನ್ ಎಂ. ಸುವರ್ಣ ಸಭಾ ಕಾರ್ಯಕ್ರಮ ನಿರೂಪಿಸಿದರು, ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಹಾಗೂ ಸಾವ೯ಜನಿಕರಿಂದ ವಿವಿಧ ವಿನೋಧಾವಿಗಳು ಜರಗಿದವು, ಶ್ರೀಮತಿ ವೀಣಾ ರಾಜೇಶ್ ಸಾಂಸ್ಕೃತಿಕ ಕಾರ್ಯಕ್ರಮ ನಿವಾ೯ಹಿಸಿದರು, ನಂತರ ಕಲಾರಂಗ ಕಾಕ೯ಳ ಇದರ ಕಲಾವಿದರ ಅಭಿನಯದ *ಪುಂಡಿ ಪಣವು* ನಾಟಕ ಪ್ರದಶ೯ನಗೊಂಡಿತು, ಯುವಕ ಮಂಡಲ ಹಾಗೂ ಮಹಿಳಾ ಮಂಡಲ ಎಲ್ಲಾ ಪದಾಧಿಕಾರಿಗಳು, ಗೌರವ ಸಲಹೆಗಾರರು ಮತ್ತು ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.