ನವದೆಹಲಿ: ಮಾರ್ಚ್02: ಕೇಂದ್ರ ಸರ್ಕಾರವು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವ ವಯಸ್ಸಿನ ಮಿತಿಯನ್ನು 80 ರಿಂದ 85 ವರ್ಷಗಳಿಗೆ ಹೆಚ್ಚಿಸಿದೆ
ಶುಕ್ರವಾರ ಕಾನೂನು ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, 85 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತಪತ್ರಗಳ ಸೌಲಭ್ಯವನ್ನು ವಿಸ್ತರಿಸಲು ಚುನಾವಣಾ ನಿಯಮಗಳು, 1961 ರಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ.
ಹಿಂದಿನ ತಿದ್ದುಪಡಿಯ ಮೂಲಕ, 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತಪತ್ರಗಳ ಮೂಲಕ ತಮ್ಮ ಹಕ್ಕು ಚಲಾಯಿಸಲು EC ಅವಕಾಶ ನೀಡಿತ್ತು..