ಹೊನ್ನಾವರ :ಫೆಬ್ರವರಿ 29:ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಂಕಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನಡಿ ಸಿಲುಕಿ ತಾಯಿ- ಮಗಳು ಸಾವನ್ನಪ್ಪಿದ್ದ ದಾರುಣ ಘಟನೆ ನಡೆದಿದೆ.
ಮುರುಡೇಶ್ವರ ಮಾವಳ್ಳಿಯ ಸವಿತಾ ರಾಜು ಆಚಾರಿ (40) ಹಾಗೂ ಅವರ ಮಗಳು ಅಂಕಿತ ಆಚಾರಿ (17) ಮೃತರು ಎಂದು ತಿಳಿದು ಬಂದಿದೆ.
ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯ ರಭಸಕ್ಕೆ ತಾಯಿ ಮಗಳು ಬಸ್ಸಿನಡಿಯಲ್ಲಿ ಸಿಲುಕಿದ್ದು ಗಂಭೀರ ಗಾಯಗೊಂಡ ತಾಯಿ ಮಗಳನ್ನು ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲಕ್ಕೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಚಾಲಕ ಬೆಳಗಾವಿ ಸವದತ್ತಿಯ ಪಕೀರಪ್ಪ ಬಸಪ್ಪ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.