ಉಡುಪಿ : ಫೆಬ್ರವರಿ 29:ಉಡುಪಿಯಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಿರುವ ನಿತ್ಯಾನಂದ ಒಳಕಾಡು ಮತ್ತು ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಪ್ರಭು ಶ್ರೀರಾಮಚಂದ್ರನ ಜನ್ಮ ಭೂಮಿ ಅಯೋಧ್ಯೆಗೆ ಆಮಂತ್ರಿಸಿ ಅಯೋಧ್ಯೆ ಶ್ರೀ ರಾಮ ದೇವರ ಸನ್ನಿದಾನದಲ್ಲಿ ಅಭಿನಂದಿಸಿದರು.
ನಾಳೆ ದಿನಾಂಕ : 01-03-2024 ರಂದು ನಿತ್ಯಾನಂದ ಒಳಕಾಡು ಮತ್ತು ವಿಶು ಶೆಟ್ಟಿ ಅಂಬಲಪಾಡಿ ಅವರ ಹೆಸರಿನಲ್ಲಿ ಪ್ರಭು ಶ್ರೀ ರಾಮಚಂದ್ರ ದೇವರಿಗೆ ಕಲಶಾರಾಧನೆ ಮತ್ತು ಕಲಶಾಭಿಷೇಕದ ಪೂಜೆ ನೆರವೇರಲಿದೆ.