ಮಂಗಳೂರು ಫೆಬ್ರವರಿ 29: ಎಂಆರ್‌ಪಿಎಲ್‌ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಹೈಡ್ರೋಕಾರ್ಬನ್ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಹೊಂದಿರುವ ಅವರು ಎಂಐಟಿ ಮಣಿಪಾಲದಿಂದ ಕೆಮಿಕಲ್ ಎಂಜಿನಿಯರಿಂಗ್ ಪದವಿ, ಮಣಿಪಾಲದ ಟಿಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಡಿಪ್ಲೋಮಾ ಪದವಿ ಪಡೆದವರು.
ಈ ಮೊದಲು ಅವರು ಕಾರ್ಯಕಾರಿ ನಿರ್ದೇಶಕ(ರಿಫೈನರಿ)ರಾಗಿ ಸೇವೆ ಸಲ್ಲಿಸಿದ್ದು, ಎಂಆರ್‌ಪಿಎಲ್‌ನ ಕಾರ್ಯನಿರ್ವಹಣೆ, ತಾಂತ್ರಿಕ ಸೇವೆ, ಉತ್ಪಾದನಾ ಯೋಜನೆಗಳಲ್ಲಿ ಚತುರತೆ ಮೆರೆದಿದ್ದಾರೆ.