ಕಾರ್ಕಳ ಫೆಬ್ರವರಿ 27:ಇಂಡಿಯನ್ ಡಿಜಿಟಲ್ ಕ್ರಿಯೇಟರ್ ಶ್ರೀಮಾ ರೈಯವರು ಲಂಡನ್ ಫ್ಯಾಶನ್ ವೀಕ್ ನಲ್ಲಿ ತನ್ನ ಆಕರ್ಶಕ ರನ್ ವೇ ನಡೆಯ ಮೂಲಕ ಮೌಕ್ತಿಕ ಕಲೆಕ್ಷನ್ (Mouktika) ಬ್ರಾಂಡ್ ನ ಚೊಚ್ಚಲ ಪ್ರದರ್ಶನದ ರೂಪದರ್ಶಿಯಾಗಿ ಆಕರ್ಷಣಾ ಬಿಂದುವಾಗಿ ಮಿಂಚಿದರು.
ಮಾಜಿ ಬ್ಯಾಂಕರ್,ಮಿಸೆಸ್ ಇಂಡಿಯಾ ಗ್ಲೋಬ್ ( Mrs India globe), ಡಿಜಿಟಲ್ ಕಂಟೆಂಟ್ ಕ್ರಿಯೇಟರ್ (digital content creator) , ರೈ ಇನ್ಸ್ಟ್ರಾ ಗ್ರಾಂ (Rai’s Instagram) ಮೂಲಕ ಖ್ಯಾತಿ ಪಡೆದ ಶ್ರೀಮಾ ರೈಯವರು ಎರಡು ಮಕ್ಕಳ ತಾಯಿ.ತನ್ನ ದಿಟ್ಟತನ, ಸೌಂದರ್ಯ, ಫ್ಯಾಶನ್,ಹಾಗೂ ತಾಯ್ತನದ ಮೂಲಕ ಜಗತ್ತಿನ ಮಹಿಳೆಯರಿಗೆ ಮಾದರಿ.
ಶ್ರೀಮಾ ಆದಿತ್ಯ ರೈ ಯವರು ನಿಟ್ಟೆಗುತ್ತು ವಿಶಾಲಿ ಹಾಗೂ ಬೆಳ್ಳಿಪ್ಪಾಡಿ ನೇಮಿರಾಜ್ ರೈಯವರ ಪುತ್ರಿ.