ಪಣಂಬೂರು: ಫೆಬ್ರವರಿ 26:ಫೆಬ್ರವರಿ 24ರಂದು ಪಣಂಬೂರು ಬೀಚ್‌ನಲ್ಲಿ ಮಧ್ಯಾಹ್ನ ನೀರಾಟವಾಡುತ್ತಿದ್ದ ವೇಳೆ ಬೃಹತ್ ಆಲೆಗೆ ಸಿಲುಕಿ ಕೊಚ್ಚಿಹೋಗಿದ್ದ ಬೈಕಂಪಾಡಿ ಮೀನಕಳಿಯ ಸರಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ತುಕಾರಾಮ (13) ಅವರ ಮೃತದೇಹ ರವಿವಾರ ಮುಂಜಾನೆ ತಣ್ಣೀರುಬಾವಿ ಬಳಿ ಪತ್ತೆಯಾಗಿದೆ.
ಮೀನುಗಾರರು ಮೃತದೇಹ ತೇಲುತ್ತಿರುವುದನ್ನು ಕಂಡಿದ್ದು, ಧನಪಾಲ್ ಸಾಲ್ಯನ್ ಅವರು ದಡಕ್ಕೆ ಎಳೆದು ತಂದು ಪೊಲೀಸರಿಗೆ ಮಾಹಿತಿ ನೀಡಿದರು.
ಶಾಲೆಯಲ್ಲಿ ಶಿಕ್ಷಕರು ಆಗಾಗಿ ಸಮುದ್ರಕ್ಕೆ ಈಜಲು ಹೋಗದಂತೆ ಎಚ್ಚರಿಕೆ ನೀಡುತ್ತಲೇ ಇದ್ದರೂ ಅದನ್ನು ಉಲ್ಲಂಘಿಸಿ ವಿದ್ಯಾರ್ಥಿಗಳು ತೆರಳುತ್ತಿರುವುದು ದುರ್ಘಟನೆಗಳಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ