ಉಡುಪಿ: ಫೆಬ್ರವರಿ 24: ಉಡುಪಿ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಯ ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿರುವ ಸ್ಟೀಲ್ ಬ್ರಿಡ್ಜ್ ಗರ್ಡರ್ ರೈಲ್ವೇ ಇಲಾಖೆಯ ಡಿ ಆರ್ ಡಿ ಒ ಪರಿಶೀಲನೆಯಿಂದ ಅಂಗೀಕೃತವಾಗಿ ಉಡುಪಿಗೆ ಇಂದು ಶನಿವಾರ .(ಫೆಬ್ರವರಿ 24) ಆಗಮಿಸಲಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಗರ್ಡರ್‌ಗಳನ್ನು ತುಂಬಿದ ಟ್ರಕ್‌ನ ಫೋಟೋ ಹಂಚಿಕೊಂಡು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
ಜೊತೆಗೆ ಉಡುಪಿ ಜನತೆಯ ಬಹು ದಿನದ ಬೇಡಿಕೆಯಾಗಿರುವ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಸಹಕರಿಸಿದ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನ್ ವೈಷ್ಣವ್, ಸ್ಥಳೀಯ ಸಂಸದರೂ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಯವರಿಗೆ ಉಡುಪಿ ಜನತೆಯ ಪರವಾಗಿ ಶಾಸಕ ಯಶ್‌ಪಾಲ್ ಸುವರ್ಣ ಧನ್ಯವಾದ ಅರ್ಪಿಸಿದ್ದಾರೆ.