ಬಂಟ್ವಾಳ: ಫೆಬ್ರವರಿ 24:ತಾಲೂಕಿನ ಬೋರಿಮಾರ್ ಮೂಲದ ಅನಿಲ್ ಜಾನ್ ಸಿಕ್ವೇರಾ ರವರು 2023 ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಿದ್ದಾರೆ, ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನದಲ್ಲಿ 25 ನೇ ವಯಸ್ಸಿನಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಅವರನ್ನು ಕಿರಿಯ ಸಿವಿಲ್ ನ್ಯಾಯಾಧೀಶರನ್ನಾಗಿ ಮಾಡಿದೆ.ಇವರ ತಂದೆ ಎವರೆಸ್ಟ್ ಸಿಕ್ವೇರಾ ಮತ್ತು ತಾಯಿ ಐವಿ ಸಿಕ್ಕ್ವೇರಾ ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ವಾಸಿಸುತ್ತಿದ್ದು ಕೃಷಿಯನ್ನು ತಮ್ಮ ಜೀವನಕ್ಕೆ ಆಧಾರವಾಗಿ ಇದ್ದ ಇವರು ಇವರ ಮಗನ ಸಾಧನಗೆ ಹಲವು ಪ್ರಶಂಸೆ ವ್ಯಕ್ತವಾಗಿದೆ