ಕಾರ್ಕಳ:ಫೆಬ್ರವರಿ 23: ಅತ್ತೂರು ಬಳಿಯ ಪರ್ಪಲೆಯಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ವಿದ್ಯಾರ್ಥಿ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ. ನಿಟ್ಟೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಆಕಾಶ್ ಕಾಂಚನ್(18) ಎಂಬಾತ ಮೃತಪಟ್ಟ ಬೈಕ್ ಸವಾರ.
ಮೃತ ಆಕಾಶ್ ಕಾಂಚನ್ ಬ್ರಹ್ಮಾವರದ ನಿವಾಸಿಯಾಗಿದ್ದು ನಿಟ್ಟೆಯ ಪ್ರಥಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ.
ಗುರುವಾರ ಕಾಲೇಜಿನಲ್ಲಿ ವಾರ್ಷಿಕೋತ್ಸವ ಇದ್ದ ಕಾರಣದಿಂದ ಆಕಾಶ್ ಕಾಂಚನ್ ಹಾಗೂ ಆತನ ಗೆಳೆಯರು ಬೇರೆ ಬೇರೆ ಬೈಕಿನಲ್ಲಿ ಬಂದು ಮರಳಿ ಕಾಲೇಜಿಗೆ ಹೋಗುವಾಗ ಪರ್ಪಲೆ ಗುಡ್ಡದ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅತೀವೇಗ ವಾಗಿ ಬೈಕ್ ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.