ಶ್ರೀನಗರ : ಫೆಬ್ರವರಿ 20: ಧ್ರುವ ಸರ್ಜಾ ನಟನೆಯ ಮಾರ್ಟೀನ್ ಚಿತ್ರತಂಡ ಪ್ರಯಾಣಿಸುತ್ತಿದ್ದ ಫ್ಲೈಟ್ ಕ್ರ್ಯಾಶ್ ಆಗಬೇಕಿತ್ತು. ಆದರೆ ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ ಎನ್ನಲಾಗುತ್ತಿದೆ.
ಮಾರ್ಟಿನ್ ಚಿತ್ರದ ಹಾಡಿನ ಶೂಟಿಂಗ್ಗಾಗಿ ಚಿತ್ರತಂಡವು ಶ್ರೀನಗರಕ್ಕೆ ತೆರಳಿತ್ತು. ಹಾಡಿನ ಚಿತ್ರೀಕರಣ ಮುಗಿಸಿಕೊಂಡು ಶ್ರೀನಗರದಿಂದ ಚಿತ್ರತಂಡ ದೆಹಲಿಗೆ ಬರುತ್ತಿತ್ತು. ನಿನ್ನೆ ಹಾಡಿನ ಚಿತ್ರೀಕರಣ ಮುಗಿಸಿರುವ ಸರ್ಜಾ ವಿಮಾನ ಮರಳುತ್ತಿತ್ತು ಈ ವೇಳೆ ವಿಮಾನ ಕ್ರ್ಯಾಶ್ ಆಗುವ ಸಂಭವವಿತ್ತು ಮಾಟಿ ಚಿತ್ರತಂಡ ಬಚಾವ್ ಆಗಿದೆ.
ನಂತರ ವಿಮಾನದಲ್ಲಿ ಧ್ರುವ ಸರ್ಜಾ ಮಾತನಾಡಿದ್ದು ಇದೊಂದು ಕೆಟ್ಟ ಅನುಭವ ಆಗಿದ್ದು. ನಮ್ಮ ಚಿತ್ರತಂಡಕ್ಕೆ ಯಾವುದೇ ರೀತಿಯಾದ ಅಪಾಯವಾಗಿಲ್ಲ ಎಲ್ಲರೂ ಸುರಕ್ಷಿತವಾಗಿದ್ದೇವೆ. ಜೈ ಆಂಜನೇಯ ಜೈ ಶ್ರೀ ರಾಮ್ ಎಂದು ತಿಳಿಸಿದ್ದಾರೆ.