ಆಸ್ಟ್ರೇಲಿಯ :ಫೆಬ್ರವರಿ 19: 73 ವರ್ಷದ ವೃದ್ಧನೊಬ್ಬ ತಾತ್ಕಾಲಿಕ ಲೈಂಗಿಕ ತೃಪ್ತಿ ಪಡೆಯುವುದಕ್ಕಾಗಿ ಬಟನ್ ಶೈಲಿಯ ಬ್ಯಾಟರಿಗಳನ್ನು ತನ್ನ ಶಿಶ್ನಕ್ಕೆ ಅಳವಡಿಸಿಕೊಂಡು ಅಪಾಯಕ್ಕೆ ಸಿಲುಕಿದ ಘಟನೆಯೊಂದು ನಡೆದಿದೆ.
ಮೂರು ಬಟನ್ ಗಾತ್ರದ ಬ್ಯಾಟರಿಗಳನ್ನು ತಮ್ಮ ಖಾಸಗಿ ಇಟ್ಟುಕೊಂಡ ನಂತರ ತಕ್ಷಣ ವೈದ್ಯಕೀಯ ಸಹಾಯವನ್ನು ಕೋರಿದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ಯುರಾಲಜಿ ಕೇಸ್ ರಿಪೋರ್ಟ್ಸ್ನಲ್ಲಿ ಪ್ರಕಟವಾದ ವೈದ್ಯಕೀಯ ಅಧ್ಯಯನದ ಪ್ರಕಾರ, ವ್ಯಕ್ತಿಯು ಉದ್ದೇಶಪೂರ್ವಕವಾಗಿ ತನ್ನ ಶಿಶ್ನದ ಮೂತ್ರನಾಳಕ್ಕೆ ಬ್ಯಾಟರಿಗಳನ್ನು ಸೇರಿಸುವ ಮೂಲಕ ತನ್ನ “ಲೈಂಗಿಕ ತೃಪ್ತಿಯನ್ನು” ಪೂರೈಸಿಕೊಳ್ಳುತಿದ್ದ ಎನ್ನಲಾಗಿದೆ.
ಈ ಘಟನೆಗೆ ಸಂಬಂಧ ಪಟ್ಟಂತೆ ವೈದ್ಯಕೀಯ ಅಧ್ಯಯನದ ಪ್ರಕಾರ, ವ್ಯಕ್ತಿ ತನ್ನ ಶಿಶ್ನ ಮೂತ್ರನಾಳಕ್ಕೆ ಬ್ಯಾಟರಿಗಳನ್ನು ಉದ್ದೇಶಪೂರ್ವಕವಾಗಿ ತಳ್ಳುವ ಮೂಲಕ ತನ್ನದೇ ಆದ ಲೈಂಗಿಕ ತೃಪ್ತಿಯನ್ನು ಅನುಭವಿಸುತ್ತಿದ್ದನು. ಈ ಸಂದರ್ಭದಲ್ಲಿ ಬ್ಯಾಟರಿಗಳು ಮೂತ್ರನಾಳದಲ್ಲಿಯೇ ಸಿಲುಕಿಕೊಂಡಿವೆ. ಮೂತ್ರನಾಳ ನೈಕ್ರೋಸಿಸ್‌ನ ಮೊದಲ ಕೇಸ್ ಎಂದು ತಜ್ಞರು ತಿಳಿಸಿದ್ದಾರೆ.
ಈ ರೀತಿಯ ಎಡವಟ್ಟುಗಳನ್ನು ಮಾಡಿಕೊಳ್ಳಬಾರದು. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಂತಹ ಯಡವಟ್ಟುಗಳನ್ನು ಮಾಡಿಕೊಳ್ಳುವುದರಿಂದ ಗ್ಯಾಂಗ್ರಿನ್ ಸಂಭವಿಸುವ ಸಾಧ್ಯತೆಯು ಅಧಿಕವಾಗಿದೆ. ಈ ರೀತಿಯ ಸೂಕ್ಷ್ಮ ಪ್ರದೇಶಗಳಿಗೆ ವಸ್ತುಗಳನ್ನು ಹಾಕಿಕೊಳ್ಳುವುದರಿಂದ ಮಾರಣಾಂತಿಕ ಕಾಯಿಲೆ ಸಂಭವಿಸಬಹುದು ಎಂದಿದ್ದಾರೆ ವೈದ್ಯರು.
ಹಲವಾರು ವಿಧಾನಗಳು ವಿಫಲವಾದ ಬಳಿಕ ವೈದ್ಯರು ಅಂತಿಮವಾಗಿ ಫೋರ್ಸ್ಪ್ಸ್ ಬಳಸಿ ಬ್ಯಾಟರಿಗಳನ್ನು ತೆಗೆದುಹಾಕಲು ಸಾಧ್ಯವಾಯಿತು. “ಎಲ್ಲಾ ಹೊರತೆಗೆಯಲಾದ ಬ್ಯಾಟರಿಗಳು ಕಪ್ಪು ಟಾರ್ ತರಹದ ವಸ್ತುಗಳಿಂದ ಲೇಪಿತವಾಗಿವೆ” ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮತ್ತೆ ಆ ವೃದ್ದನು ಆಸ್ಪತ್ರೆಗೆ ಬಂದು ವೈದರ ಬಳಿ ಊತ ಎನ್ನುತ್ತಿದ್ದಂತೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. “ಮನುಷ್ಯನ ಮೂತ್ರನಾಳದ ಭಾಗವನ್ನು ತೆಗೆಯಬೇಕಿತ್ತು. ಔಪಚಾರಿಕ ಶಿಶ್ನ ಮೂತ್ರನಾಳ ಜೀವಗೊಳಿಸಲು 3-ಹಂತದ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಪರಿಗಣಿಸಲಾಗಿದೆ” ಎಂದು ತಜ್ಞರು ತಿಳಿಸಿದ್ದಾರೆ.