ಬೆಂಗಳೂರು ಫೆಬ್ರವರಿ 19: ಬೆಂಗಳೂರಿನ ಕುಂಬಳಗೋಡಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಮೂವರು ಸಜೀವ ದಹನ ವಾಗಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಜಾಗದ ಮಾಲೀಕ ವಿಠ್ಠಲ್ ವಿರುದ್ಧ ಕುಂಬಳಗೂಡು ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.
ಗೋಡೌನ್ ನಲ್ಲಿ ಸಲೀಂ ಎಂಬಾತ ಪರ್ಫ್ಯೂಮ್ ಶೇಖರಣೆ ಮಾಡುತ್ತಿದ್ದ ಎನ್ನಲಾಗಿದೆ. ಪ್ರಕರಣ ಕುರಿತಂತೆ ಜಾಗದ ಮಾಲೀಕ ವಿಠ್ಠಲ್ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಮಾಲೀಕ ವಿಠಲ್ ಪರಾರಿಯಾಗಿದ್ದಾನೆ.
ಐಪಿಸಿ ಸೆಕ್ಷನ್ 420, 303, 304, 64, 67 ಅಡಿ ಪ್ರಕರಣ ದಾಖಲಾಗಿದೆ.ಕುಂಬಳಗೋಡಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಬೆಂಕಿಯ ಕೆನ್ನಾಲಿಗೆಗೆ ಇಡೀ ಕಾರ್ಖಾನೆ ಧಗ ಧಗನೆ ಹೊತ್ತಿ ಉರಿದು ನಿನ್ನೆ ನಡೆದ ಅಗ್ನಿ ದುರಂತದಲ್ಲಿ ಮೂವರು ಮೃತಪಟ್ಟಿದ್ದರು.