ಉಡುಪಿ:ಫೆಬ್ರವರಿ18: ದಿನಾಂಕ 17 ಫೆಬ್ರವರಿ 2024 ಶನಿವಾರ ಅಂಚೆ ಜನ ಸಂಪರ್ಕ ಅಭಿಯಾನವನ್ನು ‘ಕರುಣಾಳು ಬಾ ಬೆಳಕೆ ಪ್ರತಿಷ್ಠಾನ’ ಮತ್ತು ಫಿಶರೀಸ್ ಕಾಲೇಜ್ ಮಲ್ಪೆ ಇವರ ಸಹಭಾಗಿತ್ವದಲ್ಲಿ ಮಲ್ಪೆಯ ಫಿಶರೀಸ್ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಉಡುಪಿ ಅಂಚೆ ವಿಭಾಗದ ಅಧೀಕ್ಷಕ ಶ್ರೀ ರಮೇಶ ಪ್ರಭು, ಪ್ರತಿಷ್ಠಾನದ ಅಧ್ಯಕ್ಷೆ ಶ್ರಿಮತಿ ರಮಿತಾ ಶೈಲೇಂದ್ರ, ಊರಿನ ಹಿರಿಯರಾದ ಶ್ರಿ ಜಯಂತ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಪ್ರಭು ಸಮಾರಂಭ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ತಮ್ಮ ಪ್ರಸ್ಥಾವನೆಯಲ್ಲಿ ವಿವಿಧ ಅಂಚೆ ಸೇವೆಗಳ ಮಾಹಿತಿ ನೀಡಿದರು.
ಉಡುಪಿ ದಕ್ಷಿಣ ಉಪ ಅಂಚೆ ವಿಭಾಗದ ಶ್ರೀಮತಿ ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಅಂಚೆ ಅಭಿಯಾನದಲ್ಲಿ ಹೊಸ ಆಧಾರ್ ನೊಂದಣಿ, ಬಯೋಮೆಟ್ರಿಕ್ ಪರಿಷ್ಕರಣೆ, ವಿಳಾಸ ಹಾಗು ಮೊಬೈಲ್ ಸಂಖ್ಯೆ ತಿದ್ದುಪಡಿಯ ವ್ಯವಸ್ಥೆ ಕಲ್ಪಿಸಲಾಯಿತಲ್ಲದೆ, ವಿವಿಧ ಅಂಚೆ ಸೇವೆಗಳ ಮಾಹಿತಿಯ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಹತ್ತು ಲಕ್ಷ ರೂಪಾಯಿವರೆಗಿನ ಟಾಟಾ/ಮೀನುಗಾರರಿಗೆ ಬಜಾಜ್ ಇನ್ಸುರೆನ್ಸ್ ಅಪಘಾತ ವಿಮೆ, ಸರಕಾರದ್ ವಿವಿಧ ಜನಸ್ನೆಹಿ ಯೋಜನೆಗಳ ಫಲಾನುಭವಿಗಳಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಗಾಗಿ IPPB ಮೊದಲಾದ ಅಂಚೆ-ಆನ್ ಲೈನ್ ಖಾತೆಗಳನ್ನು ಸ್ಥಳದಲ್ಲಿಯೇ ತೆರೆಯುವ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಫಿಶರೀಸ್ ಕಾಲೇಜಿನ ಮಕ್ಕಳು, ಪೋಷಕರು ಮತ್ತು ನೂರಾರು ಸಾರ್ವಜನಿಕರು ಈ ಅಂಚೆ ಅಭಿಯಾನದ ಲಾಭ ಪಡೆದುಕೊಂಡರು.