ಉಡುಪಿ :ಫೆಬ್ರವರಿ 17: ದ್ರಶ್ಯ ನ್ಯೂಸ್ :ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಮಹಾಕಾಳಿ ಸಹಸ್ರ ಕದಳಿ ಯಾಗ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವಿಪ್ರಮೋತ್ತಮರ ಸಹಭಾಗಿತ್ವದಲ್ಲಿ ನೆರವೇರಿತು.
ದೇವಿ ಪ್ರೀತ್ಯಾರ್ಥ ನೆರವೇರಿದ ಈ ಮಹಾನ್ ಯಾಗದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣನ್ನು ತ್ರಿಮದುರಯುಕ್ತವಾಗಿ ಕಾಳಿ’ಕ’ಕಾರ ಸಹಸ್ರನಾಮದಲ್ಲಿ ಹೋಮಿಸಿ, ಕಾಳಿ ಅಷ್ಟೋತ್ತರ ನಾಮದಲ್ಲಿ ಅರ್ಚಿಸಿ ಯಾಗ ನೆರವೇರಿಸಲಾಯಿತು..
ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾದನೆ ಮಹಾ ಅನ್ನಸಂತರ್ಪಣೆ ನೆರವೇರಿತು.
ಬಹು ಅಪರೂಪವಾದ ಈ ಯಾಗದಲ್ಲಿ ಕ್ಷೇತ್ರದ ಭಕ್ತರುಗಳು ಪಾಲ್ಗೊಂಡರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.