ಉಡುಪಿ : ಫೆಬ್ರವರಿ 16:ದ್ರಶ್ಯ ನ್ಯೂಸ್ :ಇಂದು ರಥಸಪ್ತಮಿಯ ಪರ್ವದಿನದಂದು ಶ್ರೀಕೃಷ್ಣ ಮಠದಲ್ಲಿ ಸಾಮೂಹಿಕ ವಾಗಿ ಸೂರ್ಯನಮಸ್ಕಾರ ವನ್ನು ಮಾಡುವ ಮೂಲಕ ವೈಶಿಷ್ಟ್ಯ ಪೂರ್ಣವಾಗಿ ಹಬ್ಬವನ್ನು ಆಚರಿಸಲಾಯಿತು
ಜೊತೆಗೆ ಸೂರ್ಯೋದಯಕ್ಕೆ ಮುನ್ನ ಆದಿತ್ಯಹೃದಯ ಹೋಮವನ್ನೂ ಮಾಡಿ ಆದಿತ್ಯನನ್ನು ಪೂಜಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪೂಜ್ಯ ಪರ್ಯಾಯ ಶ್ರೀಪಾದರು ನಮಸ್ಕಾರಪ್ರಿಯನಾದ ಸೂರ್ಯನ ಮತ್ತು ಸೌರಶಕ್ತಿಯ ವೈಭವ ವನ್ನು ವಿವರಿಸಿ ಜಗನ್ನಿಯಾಮಕ ಸೂರ್ಯನಾರಾಯಣನ ಅನುಗ್ರಹ ಎಲ್ಲರ ಮೇಲಿರಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ಮತ್ತು SPYSS ನವರು ಆಯೋಜಿಸಿದ್ದರು
ಈ ಸಮಾರಂಭದಲ್ಲಿ ಯೋಗ ಶಿಕ್ಷಣದ ಅಧ್ಯಕ್ಷೆ ಸರೋಜಾ ರಾವ್ , ಯೋಗ ಶಿಕ್ಷಕ ಬಿರಾದರ್,ಸುದರ್ಶನ್ ಸರಲಿತ್ತಾಯ, ವಾಸುದೇವ ಭಟ್, ರಮೇಶ್, ಶೇಖರ, ದಿವಾಕರ, ಲಲಿತ ಮತ್ತಿತರರು ಉಪಸ್ಥಿತರಿದ್ದರು