ಚಾಮರಾಜನಗರ:ಫೆಬ್ರವರಿ 16:ಪತ್ನಿಯ ಕರಿಮಣಿ ಮಾಲೀಕ ರೀಲ್ಸ್ಗೆ ಮನನೊಂದು ಪತಿ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತ ವ್ಯಕ್ತಿಯ ಪತ್ನಿ ರೂಪ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಪತಿ ಸಾವಿಗೆ ಮಾಡಿಕೊಂಡಿದ್ದ ಸಾಲವೇ ಕಾರಣ ಎಂದು ಹೇಳಿದ್ದಾರೆ
‘ನಾನು ರೀಲ್ಸ್ ಮಾಡಿದಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಈ ಹಿಂದಿನಿಂದಲು ನಾನು ರೀಲ್ಸ್ ಮಾಡಿದ್ದೇನೆ, ಅದು ನನ್ನ ಪತಿ ಕುಮಾರ್ಗೂ ತಿಳಿದಿದೆ. ನನ್ನ ಮೇಲೆ ಅವರ ಕುಟುಂಬಸ್ಥರು ಸುಕಾ ಸುಮ್ಮನೆ ಆರೋಪಿಸುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಆತ್ಮಹತ್ಯೆ ಮಾಡಿಕೊಂಡ ಕುಮಾರ್ ‘ಪ್ರತಿನಿತ್ಯ ಕುಡಿಯುತ್ತಿದ್ದ, ಜೊತೆಗೆ ಇಸ್ಪಿಟ್ ಆಡುವ ಚಟ ಕೂಡ ಇತ್ತು. ಈ ಹಿನ್ನಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ನಾನು ಮಾಡಿದ್ದ ರೀಲ್ಸ್ ಕಾರಣವಲ್ಲ ಎಂದಿದ್ದಾರೆ. ಇದರ ಜೊತೆಗೆ ಆಸ್ತಿಯ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತಂತೆ. ಇದು ಒಮ್ಮೆ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು ಮತ್ತು ಸಾಲ, ಈ ಎಲ್ಲ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಯುಡಿಆರ್ ಕೇಸ್ ರಿಜಿಸ್ಟರ್ ಮಾಡಿಕೊಂಡ ಹನೂರು ಪೊಲೀಸರು ಹೆಚ್ಚಿನ ವಿಚಾರಣೆಯನ್ನ ನಡೆಸುತ್ತಿದ್ದಾರೆ.