ಉಪ್ಪಿನಂಗಡಿ:ಫೆಬ್ರವರಿ 17: ಮಲಗಿದ್ದಲ್ಲೇ ಪ್ರತಿಭಾನ್ವಿತ ಕಾಲೇಜು ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ಸಂಭವಿಸಿದೆ.
ಮೃತಪಟ್ಟ ವಿದ್ಯಾರ್ಥಿನಿ ಉದ್ಯಮಿ ದಾವೂದ್ ಅವರ ಪುತ್ರಿ ಹಫೀಝಾ (17) ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್‌ನ ಹಳೆವಿದ್ಯಾರ್ಥಿ ಯಾಗಿದ್ದು ಪ್ರಸಕ್ತ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದರು. ಬುಧವಾರ ತಡರಾತ್ರಿ ವರೆಗೆ ಅಭ್ಯಾಸ ನಿರತಳಾಗಿದ್ದ ಆಕೆ ಬಳಿಕ ನಿದ್ರಿಸಿದ್ದು, ಗುರುವಾರ ಬೆಳಗ್ಗೆ ಎದ್ದೇಳದೇ ಇರುವುದನ್ನು ಕಂಡು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ಕಂಡುಬಂದಿತು.
ಮೃತರು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.