ಬೆಂಗಳೂರು ಫೆಬ್ರವರಿ 13: ರಾಜ್ಯ ಸರ್ಕಾರ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಯುವ ಜನತೆಗೆ ಅರಿವು ಮೂಡಿಸುವ ದೃಷ್ಟಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದೀಗ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಸಂವಿಧಾನದ ಜಾಗೃತಿ ಜಾಥಾದ ಅಂಗವಾಗಿ ರಾಜ್ಯ ಸರ್ಕಾರ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎನ್ನುವ ಸುವರ್ಣಾವಕಾಶವನ್ನು ನೀಡಿದೆ.
ಸಂವಿಧಾನದ ಅರಿವು ಕೇವಲ ಪುಸ್ತಕಗಳಲ್ಲಿ ಅಥವಾ ಶಾಲಾ ಕಾಲೇಜುಗಳಿಗಷ್ಟೇ ಸೀಮಿತವಾಗಿರದೇ ಪ್ರತಿಯೊಬ್ಬರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದು, ಈಗಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂದು ಘೋಷಿಸಿದೆ.
ಸಂವಿಧಾನದ ಜಾಗೃತಿ ಜಾಥಾದ ಅಂಗವಾಗಿ ರೀಲ್ಸ್ ಮಾಡಿ ಬಹು ದೊಡ್ಡ ಮೊತ್ತದ ನಗದು ಬಹುಮಾನ ಪಡೆಯಬಹುದಾಗಿದೆ.
30 ರಿಂದ 40 ಸೆಕೆಂಡ್ಗಳಷ್ಟೇ ಹೊಂದಿರುವ ವಿಡಿಯೋದಲ್ಲಿ ಸಂವಿಧಾನದ ಜಾಗೃತಿ ಜಾಥಾದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 50,000 ರೂಪಾಯಿ, ದ್ವಿತೀಯ ಬಹುಮಾನ 25,000 ರೂಪಾಯಿ ಹಾಗೂ ತೃತೀಯ ಬಹುಮಾನ 15,000 ರೂಪಾಯಿ ನಗದು ಬಹುಮಾನ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.
ರೀಲ್ಸ್‌ನಲ್ಲಿ ಏನಿರಬೇಕು?ನೀವು ಮಾಡುವ ರೀಲ್ಸ್ ಈ ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕು
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು
- ಸಂವಿಧಾನದ ಮಹತ್ವ
- ಪೀಠಿಕೆಯ ವೈಶಿಷ್ಟ್ಯ
- ಸಂವಿಧಾನಕ್ಕೆ ಸಂಬಂಧಿಸಿದ ಯಾವುದಾರೂ ಅಂಶ
ಜನರೀಲ್ಸ್ ಮಾಡಲು ನಿಬಂಧನೆಗಳೇನು..?
- ಆಯೋಜಕ ತಂಡದಿಂದ ಅನುಮೋದಿಸ್ಪಟ್ಟವರಿಗೆ ಮಾತ್ರ ಅವಕಾಶ
- ರೀಲ್ಸ್‌ಗಳು ನಿಗದಿಪಡಿಸಿದ ವಿಷಯಗಳನ್ನು ಒಳಗೊಂಡಿರಬೇಕು
- ರೀಲ್ಸ್‌ನ ಯುಆರ್‌ಎಲ್ ಅನ್ನು ಫೆಬ್ರವರಿ 20ರವೊಳಗೆ ಆಯೋಜಕರಿಗೆ ಕಳುಹಿಸಬೇಕು.
ಫೆಬ್ರವರಿ 22ರ ಸಂಜೆ 5 ಗಂಟೆವರೆಗೆ ಸಾಮಾಜಿಕ ಜಾಲತಾಣದಲ್ಲಿ ಪಡೆದ ಲೈಕ್ಸ್‌ಗಳ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಆಯೋಜಕ ತಂಡ ತಿಳಿಸಿದೆ.