ಉಡುಪಿ, 13 ಫೆಬ್ರವರಿ 2024 – ಡಾ. ಟಿ.ಎಂ.ಎ. ಪೈ ಆಸ್ಪತ್ರೆಯು ನರರೋಗ ಶಾಸ್ತ್ರ ಕ್ಲಿನಿಕ್ ಅನ್ನು ಪರಿಚಯಿಸುವ ಮೂಲಕ ತನ್ನ ವೈದ್ಯಕೀಯ ಸೇವೆಗಳನ್ನು ಹೆಚ್ಚಿಸಲು ಸಜ್ಜಾಗಿದೆ. ಈ ಕ್ಲಿನಿಕ್ ಹೊರರೋಗಿಗಳ ಸಮಾಲೋಚನೆಗಾಗಿ 16 ಫೆಬ್ರವರಿ 2024 ರಿಂದ ಪ್ರಾರಂಭವಾಗುತ್ತದೆ. ಖ್ಯಾತ ನರರೋಗ ತಜ್ಞ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲದ ಸಹ ಪ್ರಾಧ್ಯಾಪಕ ಡಾ ನಿಕಿತ್ ಅಂಪಾರ್, ಪ್ರತಿ ಶುಕ್ರವಾರ ಮಧ್ಯಾಹ್ನ ಗಂಟೆ 12:30 ರಿಂದ ಸಂಜೆ 4:00 ರವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ.
ಈ ಕೆಳಗಿನ ರೋಗ ಲಕ್ಷಣಗಳಿರುವ ರೋಗಿಗಳು ನರರೋಗ ಶಾಸ್ತ್ರ ತಜ್ಞರನ್ನು ಭೇಟಿ ಮಾಡಬಹುದು, ವಿಶೇಷವಾಗಿ : ಪಾರ್ಶ್ವವಾಯು, ಪಾರ್ಕಿನ್ಸನ್ ಮತ್ತು ಚಲನೆ-ಸಂಬಂಧಿತ ಅಸ್ವಸ್ಥತೆಗಳು, ಮೈಗ್ರೇನ್ (ತೀವ್ರ ತಲೆ ನೋವು) ಮತ್ತು ಇತರ ತಲೆನೋವು ಅಸ್ವಸ್ಥತೆಗಳು, ಮರೆವಿನ ತೊಂದರೆ (ಮೆಮೊರಿ ಲಾಸ್), ಮೆದುಳಿನ ಸೋಂಕುಗಳು, ಮಲ್ಟಿಪಲ್ ಸ್ಕ್ಲೆರೋಸಿಸ್ ಹಾಗೂ ಇನ್ನಿತರ ಯಾವುದೇ ನರರೋಗ ಸಮಸ್ಯೆಗಳು. ಡಾ.ಟಿಎಂಎ ಪೈ ಆಸ್ಪತ್ರೆ, ಉಡುಪಿಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ಮಾತನಾಡಿ, “ನಮ್ಮ ವೈದ್ಯಕೀಯ ಪರಿಣಿತರ ತಂಡಕ್ಕೆ ಡಾ. ನಿಕಿತ್ ಅಂಪಾರ್ ಅವರನ್ನು ಸ್ವಾಗತಿಸಲು ನಮಗೆ ತುಂಬಾ ಸಂತೋಷವಾಗಿದೆ. ನರರೋಗ ತಜ್ಞರ ಸೇರ್ಪಡೆಯಿಂದಾಗಿ ಉಡುಪಿಯ ಜನರಿಗೆ ಸೂಕ್ತಕಾಲದಲ್ಲಿ ರೋಗನಿರ್ಣಯದೊಂದಿಗೆ ಗುಣಮಟ್ಟದ ವೈದ್ಯಕೀಯ ಆರೈಕೆ ಸಮುದಾಯಕ್ಕೆ ತಲುಪಿಸುವ ನಮ್ಮ ಬದ್ಧತೆಗೆ ಹೊಂದಾಣಿಕೆಯಾಗುತ್ತದೆ”ಎಂದು ಹೇಳಿದ್ದಾರೆ .